ADVERTISEMENT

ಕಳ್ಳತನ ನಡೆದ 4 ಗಂಟೆಯಲ್ಲೇ ಪ್ರಕರಣ ಭೇದಿಸಿದ ಕಗ್ಗಲೀಪುರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 16:43 IST
Last Updated 18 ಅಕ್ಟೋಬರ್ 2024, 16:43 IST
ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯ ಬೆದರಿಸಿ ಕಿತ್ತುಕೊಂಡು ಹೋಗಿದ ಸುಮಾರು 9 ಲಕ್ಷ ಬೆಲೆ ಬಾಳುವ ಸ್ವೀಪ್ಟ್ ಡಿಜೈರ್ ಕಾರನ್ನು ಅಮಾನತ್ತುಪಡಿಸಿಕೊಂಡಿರುವ ಪೊಲೀಸರು
ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯ ಬೆದರಿಸಿ ಕಿತ್ತುಕೊಂಡು ಹೋಗಿದ ಸುಮಾರು 9 ಲಕ್ಷ ಬೆಲೆ ಬಾಳುವ ಸ್ವೀಪ್ಟ್ ಡಿಜೈರ್ ಕಾರನ್ನು ಅಮಾನತ್ತುಪಡಿಸಿಕೊಂಡಿರುವ ಪೊಲೀಸರು   

ಹಾರೋಹಳ್ಳಿ:ಕಳ್ಳತನ ನೆಡೆದ ಗಂಟೆಯಲ್ಲಿಯೇ ಪ್ರಕರಣವನ್ನು ಬೇಧಿಸುವಲ್ಲಿ ಕಗ್ಗಲೀಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಗ್ಗಲೀಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ತಾತಗುಣಿ- ಕುಪ್ಪರೆಡ್ಡಿ ಕೆರೆ ಕ್ರಾಸ್‌ ಬಳಿ ವ್ಯಕ್ತಿಯೊಬ್ಬರನ್ನು ಬೆದರಿಸಿ, ಬಲವಂತವಾಗಿ ಕಾರನ್ನು ಕಿತ್ತುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ವರದಿಯಾದ 4 ಗಂಟೆಯೊಳಗೆ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಗ್ಗಲೀಪುರ ಪೊಲೀಸರು ಯಶ್ವಿಯಾಗಿದ್ದಾರೆ.

ಅಕ್ಟೋಬರ್ 17 ರಾತ್ರಿ 11.45 ಗಂಟೆಯಲ್ಲಿ ಮನೋಹರ್ ಸಿಂಗ್ ಎಂಬ ವ್ಯಕ್ತಿ ಸ್ವೀಪ್ಟ್ ಡಿಜೈರ್ ಕಾರನ್ನು ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ತಾತಗುಣಿ-ಕುಪ್ಪರೆಡ್ಡಿ ಕೆರೆ ಕ್ರಾಸ್ ಬಳಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ ಚಾಲಕನಿಗೆ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ ಕಾರಿನ ಕೀಯನ್ನು ಪಡೆದುಕೊಂಡು ಕಾರನ್ನು ಕಿತ್ತುಕೊಂಡು ಹೋಗಿದ್ದ ಬಗ್ಗೆ ನೀಡಿದ ದೂರಿನ ಮೇರೆಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದು, ಪ್ರಕರಣ ವರದಿಯಾದ ಕೇವಲ 4 ಗಂಟೆಯೊಳಗೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಅಕ್ಟೋಬರ್ 18 ರಂದು ಬಂಧಿಸಿ ಹಾಗೂ ಈ ಪ್ರಕರಣದಲ್ಲಿ ವ್ಯಕ್ತಿಯ ಬೆದರಿಸಿ ಕಿತ್ತುಕೊಂಡು ಹೋಗಿದ

ಸುಮಾರು 9 ಲಕ್ಷ ಬೆಲೆ ಬಾಳುವ ಸ್ವೀಪ್ಟ್ ಡಿಜೈರ್ ಕಾರನ್ನು ಅಮಾನತ್ತುಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಾತಗುಣಿ ನಿವಾಸಿಗಳಾದ ಚಂದು (25) , ಭರತ್ ಕುಮಾರ್ (37) ಬಂಧಿಸಲಾಗಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ವೆಂಕಟೇಶ್.ಕೆ ರವರು ನೇತೃತ್ವ ವಹಿಸಿದ್ದು, ಪಿಎಸ್‌ಐ ಲೋಕೇಶ್.ಸಿ, ಮತ್ತು ಸಿಬ್ಬಂದಿಗಳಾದ ಸರಸ್ವತಮ್ಮ, ಪ್ರಕಾಶ,

ಮುರಳೀಧರ,ನಾಗರಾಜು, ಮಂಜುನಾಥ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.