ADVERTISEMENT

ಎಕ್ಸ್‌ಪ್ರೆಸ್ ಕೆನಾಲ್ | ನಿದ್ದೆಗೆ ಜಾರಿದ ಮಾಗಡಿ ಜನ: ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:30 IST
Last Updated 23 ಜೂನ್ 2024, 16:30 IST
<div class="paragraphs"><p>ಮಾಗಡಿ ಸೋಮೇಶ್ವರ ಬಡಾವಣೆಯಲ್ಲಿ ಕಾಂಗ್ರೆಸ್ ವತಿಯಿಂದ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭವನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು. ಶಾಸಕ ಹೆಚ್.ಸಿ.ಬಾಲಕೃಷ್ಣ ಇದ್ದರು</p></div>

ಮಾಗಡಿ ಸೋಮೇಶ್ವರ ಬಡಾವಣೆಯಲ್ಲಿ ಕಾಂಗ್ರೆಸ್ ವತಿಯಿಂದ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭವನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು. ಶಾಸಕ ಹೆಚ್.ಸಿ.ಬಾಲಕೃಷ್ಣ ಇದ್ದರು

   

ಮಾಗಡಿ: ‘ಸಂಸದನಾಗಿ ಹತ್ತು ವರ್ಷ ಎಂಟು ತಿಂಗಳ ಕಾಲ ಕ್ಷೇತ್ರದ ಅಭಿವೃದ್ಧಿ ಮಾಡಿ ಜನಗಳ ಬಳಿ ಕೂಲಿ ಮಾಡಿದ್ದೇನೆ. ಮತ ನೀಡಿ ಎಂದು ಕೇಳಿದೆ. ನೀನು ಸರಿಯಾಗಿ ಕೂಲಿ ಮಾಡಿಲ್ಲ ಎಂದು ನನಗೆ ವಿಶ್ರಾಂತಿ ನೀಡಿದ್ದಾರೆ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸೋಮೇಶ್ವರ ಬಡಾವಣೆಯಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆ ಉದ್ಘಾಟಿಸಿ ಮಾತನಾಡಿದರು. ‘ನನ್ನ ಸೋಲು ಯಾರ ಮೇಲೂ ವಹಿಸುವುದಿಲ್ಲ. ಈ ಸೋಲು ವೈಯಕ್ತಿಕವಾಗಿ ಒಪ್ಪಿಕೊಳ್ಳುತ್ತೇನೆ. ಸಂಸತ್ ಸ್ಥಾನ ಅಪ್ಪನ ಮನೆ ಆಸ್ತಿಯಲ್ಲ. ಜನರು ನಾನು ಸರಿಯಾಗಿ ಕೂಲಿ ಮಾಡಿಲ್ಲ ಎಂದು ಮತ್ತೊಬ್ಬರಿಗೆ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿದ್ದಾರೆ. ನಾನು ಐದು ವರ್ಷಗಳ ಕಾಲ ವಿಶ್ರಾಂತಿಯಲ್ಲಿ ಇದ್ದು ನಾನು ಚುನಾವಣೆಗೆ ಮುನ್ನ ನೀಡಿದ ಅಭಿವೃದ್ಧಿ ವಿಚಾರ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು‘ ಎಂದರು.

ADVERTISEMENT

ಕೇಂದ್ರದಿಂದ ಕಿಸಾನ್ ಸಮ್ಮಾನ್ ಯೋಜನೆಯಡಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಿದೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ. ಬಿಜೆಪಿ ಪ್ರಚಾರದಿಂದಲೇ ಜನರನ್ನು ಧಿಕ್ಕು ತಪ್ಪಿಸುತ್ತಿದೆ ವಾಗ್ದಾಳಿ ನಡೆಸಿದರು.

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರವಾಗಿ ತುಮಕೂರಿನಲ್ಲಿ ಜೂ.25ರಂದು ಬಂದ್ ನಡೆಯಲಿದೆ. ಮಾಗಡಿಯಲ್ಲಿ ಜನರು ಇನ್ನು ಚಾಪೆ ಹಾಕಿಕೊಂಡು ಮಲಗಿದ್ದಾರೆ. ಸಂಸದರನ್ನು ‍ಪ್ರಶ್ನೆ ಮಾಡಬೇಕಾಗಿದೆ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ಸಿ.ಎಂಲಿಂಗಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಎನ್.ಅಶೋಕ್, ಚಿಗಲೂರು ಗಂಗಾಧರ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ಬಿ.ಎಸ್.ಕುಮಾರ್, ವಿಜಯಕುಮಾರ್, ಪೂಜಾರಿಪಾಳ್ಯ ಕೃಷ್ಣಮೂರ್ತಿ, ದೀಪ, ಶಿವಪ್ರಸಾದ್, ಕೆಂಚೇಗೌಡ, ಸಿ.ಜಯರಾಂ, ಶೈಲಜಾ, ವನಜಾ, ಸುರೇಶ್, ಮಂಜೇಶ್, ಕಲ್ಕರೆ ಶಿವಣ್ಣ ಸೇರಿದಂತೆ ಅನೇಕ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.