ADVERTISEMENT

ಚಂದನದಲ್ಲಿ ಕಲಾಜ್ಯೋತಿ ಕಲಾಕೇಂದ್ರದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 3 ಮೇ 2024, 5:58 IST
Last Updated 3 ಮೇ 2024, 5:58 IST
ದೂರದರ್ಶನ ಚಂದನ ವಾಹಿನಿಯ ‘ಶಕ್ತಿ ಮಹಿಳಾ ಕಾರ್ಯಕ್ರಮ’ದಲ್ಲಿ ನೃತ್ಯ ಪ್ರದರ್ಶನ ನೀಡಿದ ರಾಮನಗರದ ಕಲಾಜ್ಯೋತಿ ಕಲಾ ಕೇಂದ್ರದ ಎಬಿಸಿಡಿ ನೃತ್ಯ ಶಾಲೆಯ ವಿದ್ಯಾರ್ಥಿಗಳು
ದೂರದರ್ಶನ ಚಂದನ ವಾಹಿನಿಯ ‘ಶಕ್ತಿ ಮಹಿಳಾ ಕಾರ್ಯಕ್ರಮ’ದಲ್ಲಿ ನೃತ್ಯ ಪ್ರದರ್ಶನ ನೀಡಿದ ರಾಮನಗರದ ಕಲಾಜ್ಯೋತಿ ಕಲಾ ಕೇಂದ್ರದ ಎಬಿಸಿಡಿ ನೃತ್ಯ ಶಾಲೆಯ ವಿದ್ಯಾರ್ಥಿಗಳು   

ರಾಮನಗರ: ನಗರದ ಕಲಾಜ್ಯೋತಿ ಕಲಾಕೇಂದ್ರದ ಎಬಿಸಿಡಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ‘ಶಕ್ತಿ ಮಹಿಳಾ ಕಾರ್ಯಕ್ರಮ’ದಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಕಲಾಕೇಂದ್ರದ ವಿದ್ಯಾರ್ಥಿಗಳ ತಂಡವು ‘ಶಕ್ತಿ ಮಹಿಳಾ ಕಾರ್ಯಕ್ರಮ’ಕ್ಕೆ ಆಯ್ಕೆಯಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ಕಲೆಗಳ ಪಟ ಕುಣಿತ ಹಾಗೂ ಕಂಸಾಳೆ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯ ತಂಡದಲ್ಲಿ ಸದಸ್ಯರಾದ ದೀಪಿಕಾ, ಬಿಂದು, ಸತ್ಯ, ನಿಸರ್ಗ, ಗೀತಾ, ಭವಿತ, ಧೃತಿ, ಮೌಲ್ಯ ಹಾಗೂ ಮಾನ್ಯ ಅವರಿದ್ದರು ಎಂದು ತಂಡದ ಭಾಗವಾದ ಕಲಾ ಕೇಂದ್ರದ ರೇಣುಕ ಪ್ರಸಾದ್ ತಿಳಿಸಿದರು.

ಕೇಂದ್ರ ವಿದ್ಯಾರ್ಥಿಗಳು ಕನ್ನಡವಷ್ಟೇ ಅಲ್ಲದೆ, ತೆಲುಗು ಮತ್ತು ತಮಿಳು ಟಿವಿ ಚಾನೆಲ್‌ಗಳಲ್ಲಿ ಸಹ ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆ. ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್, ಸ್ಟಾರ್ ಸುವರ್ಣ ಚಾನೆಲ್ ಸುವರ್ಣ ಸೂಪರ್ ಸ್ಟಾರ್‌ ಕಾರ್ಯಕ್ರಮದಲ್ಲಿ ಸಹ ನೃತ್ಯ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.