ADVERTISEMENT

ರಾಮನಗರ | ಬದುಕಿದ್ದಾಗಲೇ ಮರಣ ಪ್ರಮಾಣಪತ್ರ!

ಹಾರೋಹಳ್ಳಿ ನಿವಾಸಿ ರುದ್ರಮ್ಮ ಹೆಸರಿನಲ್ಲಿ ನೀಡಿಕೆ: ತನಿಖೆಗೆ ಕುಟುಂಬಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 0:45 IST
Last Updated 4 ಮಾರ್ಚ್ 2023, 0:45 IST
ರುದ್ರಮ್ಮ 2022ರ ಜೂನ್‌ 30ರಂದು ನಿಧನರಾಗಿದ್ದಾಗಿ ಹಾರೋಹಳ್ಳಿ ವಿ.ಎ. ನೀಡಿರುವ ಮರಣ ಪ್ರಮಾಣಪತ್ರ
ರುದ್ರಮ್ಮ 2022ರ ಜೂನ್‌ 30ರಂದು ನಿಧನರಾಗಿದ್ದಾಗಿ ಹಾರೋಹಳ್ಳಿ ವಿ.ಎ. ನೀಡಿರುವ ಮರಣ ಪ್ರಮಾಣಪತ್ರ   

ರಾಮನಗರ: ಹಾರೋಹಳ್ಳಿಯಲ್ಲಿ ಮಹಿಳೆಯೊಬ್ಬರು ಬದುಕಿದ್ದಾಗಲೇ ಆಕೆಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ ವಿತರಣೆ ಆಗಿದ್ದು, ಈ ಬಗ್ಗೆ ಕ್ರಮಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಹಾರೋಹಳ್ಳಿಯ ಕೆಳಗಲಬೀದಿ ನಿವಾಸಿ ಎಚ್.ಆರ್. ರುದ್ರಮ್ಮ (70) ಇದೇ ಫೆಬ್ರುವರಿ 18ರಂದು ಬೆಂಗಳೂರಿನ ವೈದೇಹಿ ಆಸ್ಪತ್ರೆ
ಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಅಂತಿಮ ವಿಧಿವಿಧಾನಗಳನಂತರ ಅವರ ಕುಟುಂಬಸ್ಥರು ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಹೆಸರಿನಲ್ಲಿ 2022ರ ಜೂನ್‌ 30ರಂದೇ ಮರಣ ಪ್ರಮಾಣಪತ್ರ ವಿತರಣೆ ಆಗಿರುವುದು ಈ ವೇಳೆ ಕಂಡುಬಂದಿದೆ. ಹಾರೋಹಳ್ಳಿ ವೃತ್ತ ಗ್ರಾಮ ಲೆಕ್ಕಾಧಿಕಾರಿ ಹೆಸರಿನಲ್ಲಿ ಈ ಪ್ರಮಾಣಪತ್ರವನ್ನು ನೀಡಲಾಗಿದೆ. ಈ ವಿವರ ಕೇಳಿ ಕುಟುಂಬಸ್ಥರು ದಂಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT