ADVERTISEMENT

ಕನಕಪುರ: ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ

​ಪ್ರಜಾವಾಣಿ ವಾರ್ತೆ
Published 6 ಮೇ 2024, 14:36 IST
Last Updated 6 ಮೇ 2024, 14:36 IST
ಬೀದಿನಾಯಿಗಳ ದಾಳಿಗೆ ಸಿಲುಕಿ ಸಾವನಪ್ಪಿದ ಜಿಂಕೆ
ಬೀದಿನಾಯಿಗಳ ದಾಳಿಗೆ ಸಿಲುಕಿ ಸಾವನಪ್ಪಿದ ಜಿಂಕೆ   

ಕನಕಪುರ: ನೀರು ಮತ್ತು ಮೇವು ಅರಸಿ ಕಾಡಿನಿಂದ ಶನಿವಾರ ಹಲಸಿನಮರದೊಡ್ಡಿ ಗ್ರಾಮಕ್ಕೆ ಬಂದಿದ್ದ ಜಿಂಕೆಯೊಂದರ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ ಜಿಂಕೆ ಸಾವಿಗೀಡಾಗಿದೆ.

ಸಾವಿಗೀಡಾದ ಜಿಂಕೆಗೆ ಸುಮಾರು ಆರು ವರ್ಷ ಇರಬಹುದು ಎನ್ನಲಾಗಿದೆ. ಮೇವು ಅರಸಿ ಗ್ರಾಮಕ್ಕೆ ಬಂದಿದ್ದ ಜಿಂಕೆ ಮೇಲೆ ಸುಮಾರು 15 ಬೀದಿನಾಯಿಗಳು ಗುಂಪಾಗಿ ದಾಳಿ ನಡೆಸಿವೆ. ಈ ವೇಳೆ ಗ್ರಾಮಸ್ಥರು ಬೀದಿನಾಯಿಗಳನ್ನು ಓಡಿಸಿ ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಗಾಯಗೊಂಡಿದ್ದ ಜಿಂಕೆಯನ್ನು ಸಾತನೂರಿನ ವಲಯ ಅರಣ್ಯಾಧಿಕಾರಿಗಳಿಗೆ ಒಯ್ದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಗಂಭೀರ ಗಾಯಗೊಂಡಿದ್ದ ಜಿಂಕೆ ಸಾವಿಗೀಡಾಗಿದೆ.

ADVERTISEMENT

 ಅರಣ್ಯ ಇಲಾಖೆಯ ನಿಯಮಾನುಸಾರ ಜಿಂಕೆಯ ಮೃತದೇಹದ ಸಂಸ್ಕಾರ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.