ADVERTISEMENT

ಕನಕಪುರ | ಜಿಂಕೆ ಮಾಂಸ ವಶ: ಆರೋಪಿಗಳು ಪರಾರಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 7:17 IST
Last Updated 28 ಸೆಪ್ಟೆಂಬರ್ 2024, 7:17 IST

ಕನಕಪುರ: ಅರಣ್ಯದಲ್ಲಿ ಜಿಂಕೆಗಳ ಅಕ್ರಮ ಬೇಟೆಯಾಡಿ ಮಾಂಸವನ್ನು ತುಂಡರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು, ಆರೋಗಳು ತಪ್ಪಿಸಿಕೊಂಡಿದ್ದಾರೆ.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ನಲ್ಲಳ್ಳಿ ಗ್ರಾಮದ ತೋಟದ ಮನೆಯಲ್ಲಿ ಜಿಂಕೆ ಮಾಂಸವನ್ನು ತುಂಡರಿಸಿ ಬೇರ್ಪಡಿಸುತ್ತಿದ್ದಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಜ್ಯೋತಿ ನಗರದ ನಿವಾಸಿ ಪ್ರದೀಪ್ ಬಿನ್ ಹಂದಿ ಮರಿಯಪ್ಪ(26), ಮಣಿಕಂಠ ಬಿನ್ ಭರ್ಮ(30), ಸತೀಶ್ (28), ದೊಡ್ಡಾಲಹಳ್ಳಿ ಗ್ರಾಮದ ಶಶಿಕುಮಾರ್ ಅಲಿಯಾಸ್ ಚಂದ್ರಣ್ಣ(36) ಎಂದು ಗುರುತಿಸಲಾಗಿದೆ. ಮೂರು ಜಿಂಕೆಯ ಮಾಂಸ, ಬೇಟೆಯಾಡಲು ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಪತ್ತೆಗಾಗಿ ಶೋಧಕಾರ್ಯ ಆರಂಭಿಸಲಾಗಿದೆ.

ADVERTISEMENT

ಪ್ರಭಾರ ವಲಯ ಅರಣ್ಯ ಅಧಿಕಾರಿ ರವಿ.ಸಿ, ಉಪವಲಯ ಅರಣ್ಯ ಅಧಿಕಾರಿ ಮತ್ತು ಸ್ವಾಮಿ ನಾಯಕ್, ಕೃಷ್ಣ, ಗಸ್ತು ಅರಣ್ಯ ಪಾಲಕರಾದ ಮಳೆಯಪ್ಪ, ಚೆನ್ನವೀರಪ್ಪ ಪೂಜಾರಿ ಸಿಬ್ಬಂದಿ ಗೋಪಾಲ್, ವಾಹನ ಚಾಲಕ ಮುತ್ತುರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.