ADVERTISEMENT

ಲಕ್ಷ ತೆಂಗಿನ ಸಸಿ ವಿತರಣೆ ಗುರಿ: ಕೆ.ಪಿ.ನಾಗೇಶ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 7:48 IST
Last Updated 24 ಜೂನ್ 2024, 7:48 IST
ಮಾಗಡಿ ರೋಟರಿ ಕಚೇರಿ ಆವರಣದಲ್ಲಿ ರೈತರಿಗೆ ಉಚಿತ ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಯಿತು
ಮಾಗಡಿ ರೋಟರಿ ಕಚೇರಿ ಆವರಣದಲ್ಲಿ ರೈತರಿಗೆ ಉಚಿತ ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಯಿತು   

ಮಾಗಡಿ: ರೈತರು ಪರಿಸರವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬೇಕು. ಪ್ರತಿ ರೈತರಿಗೆ 5 ತೆಂಗಿನ ಸಸಿಗಳನ್ನು ರೋಟರಿ ವತಿಯಿಂದ ವಿತರಣೆ ಮಾಡಲಾಗುತ್ತಿದೆ ಎಂದು ರೋಟರಿಯ ಪಿಡಿಎಸ್ ಕೆ.ಪಿ.ನಾಗೇಶ್ ಹೇಳಿದರು.

ಪಟ್ಟಣದ ರೋಟರಿ ಕಚೇರಿಯಲ್ಲಿ ಗುರುವಾರ ಲಕ್ಷ ಕಲ್ಪವೃಕ್ಷ ಕಾರ್ಯಕ್ರಮದಡಿ ರೈತರಿಗೆ ಉಚಿತ ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿದರು. 

ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ ಒಂದು ಲಕ್ಷ ತೆಂಗಿನ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಒಂದು ತೆಂಗಿನ ಮರ ನೆಟ್ಟರೆ ಅದು 5 ವರ್ಷದಲ್ಲಿ ಫಲ ನೀಡುತ್ತದೆ. ವರ್ಷಕ್ಕೆ 300 ತೆಂಗಿನಕಾಯಿ ಉತ್ಪತ್ತಿಯಾಗುತ್ತದೆ. ಇದರಿಂದ ರೈತರಿಗೆ ವರ್ಷಕ್ಕೆ ಒಂದು ಮರದಿಂದ 5 ಸಾವಿರ ಆದಾಯ ಬರುತ್ತದೆ. ಒಂದು ತೆಂಗಿನ ಮರ 70 ವರ್ಷ ಜೀವಿಸುವುದರಿಂದ 65 ವರ್ಷ ಕಾಲ ರೈತರಿಗೆ ನಿಶ್ಚಿತ ಆದಾಯ ಸಿಗಲಿದೆ ಎಂದರು.

ADVERTISEMENT

ರೋಟೇರಿಯನ್ ರವಿಶಂಕರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಬಡ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ರೋಟರಿ ಸಂಸ್ಥೆಯಿಂದ ಕಾಮದೇನು ಯೋಜನೆ ಪ್ರಾರಂಭಿಸಲಾಗಿದೆ ಎಂದರು.

ರೋಟೇರಿಯನ್ ಶಿವಕುಮಾರ್ ಮಾತನಾಡಿ, ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಅವರಣದಲ್ಲಿ 10 ಸಾವಿರ ಗಿಡ ನೆಡಲಾಗಿದೆ ಎಂದು ತಿಳಿಸಿದರು.

ಮಾಗಡಿ ತಾಲೂಕು ರೋಟೇರಿಯನ್‌ಗಳಾದ ಹಾರೋಹಳ್ಳಿ ವಿನೋದ್, ವಕೀಲ ಲಕ್ಷ್ಮಿಪ್ರಸಾದ್, ಎಂ.ಪಿ.ಗಣೇಶ್, ದಕ್ಷಿಣಾಮೂರ್ತಿ, ವೈದ್ಯ ಡಾ.ಮಂಜುನಾಥ್ ಬೆಟಗೇರಿ, ಲ್ಯಾಬ್ಲೋಕೇಶ್, ವೇಣುಗೋಪಾಲ್, ಪ್ರಸಾದ್, ಜಯಶಂಕರ್, ತಿರುಮುರುಗನ್, ಮೋಹನ್, ಅಭಯ ಚಂದ್ರ, ವಿನೋದ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.