ADVERTISEMENT

ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 14:24 IST
Last Updated 4 ಮಾರ್ಚ್ 2020, 14:24 IST
ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ತಮ್ಮ ಕಲೆ ಪ್ರದರ್ಶಿಸಿದರು
ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ತಮ್ಮ ಕಲೆ ಪ್ರದರ್ಶಿಸಿದರು   

ಚನ್ನಪಟ್ಟಣ: ದೇಹವನ್ನು ಪಳಗಿಸಲು ಕಠಿಣ ಪರಿಶ್ರಮ ಅಗತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೂರಣಗೆರೆ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡಿಂಗ್ ಸಂಸ್ಥೆ, ಬೊಂಬೆನಾಡು ಯುವ ಚೇತನ ಸೇನೆ ವತಿಯಿಂದ ಈಚೆಗೆ ನಡೆದ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ`ಮಿಸ್ಟರ್ ಬೊಂಬೆನಾಡು' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಏಕಲವ್ಯ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಪ್ರಸಾದ್ ಉದ್ಘಾಟಿಸಿದರು. ಸಮಾಜ ಸೇವಕ ಅಬ್ಬಿಗೆರೆ ರಾಜಣ್ಣ, ಸುಮತಿ ಕುಮಾರ್ ಜೈನ್, ಬಸವರಾಜು, ಮುಖಂಡರಾದ ಸಿದ್ದರಾಜು, ಪಿ.ನಾಗೇಂದ್ರ, ಆನಂದ ಸ್ವಾಮಿ, ಸುಮಂತ್, ಚನ್ನಪ್ಪ, ಅಭಿಷೇಕ್, ಮಂಜುನಾಥ್, ರಂಜಿತ್ ಕುಮಾರ್, ಶ್ರೀನಿವಾಸ್, ರವೀಶ್, ದಯಾನಂದ್, ಭಾಗವಹಿಸಿದ್ದರು.

ADVERTISEMENT

ಸ್ಪರ್ಧೆಯಲ್ಲಿ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ತಾಲ್ಲೂಕಿನ ಹಲವು ಸ್ಪರ್ಧಿಗಳು ಭಾಗವಹಿಸಿದ್ದರು.

ಯೋಗ ಶಿಕ್ಷಕಿ ಗೀತಾ ವೆಂಕಟೇಶ್ ತಂಡ ಯೋಗಾಸನ ಪ್ರದರ್ಶನ ನಡೆಸಿಕೊಟ್ಟರು. ಕರಾಟೆ ಶಿಕ್ಷಕ ಆನಂದ್ ತಂಡ ಕರಾಟೆ ಪ್ರದರ್ಶನ ನಡೆಸಿಕೊಟ್ಟರು. ರೇಣುಕಾ ಪ್ರಸಾದ್, ಶರಣ್ ನೃತ್ಯ ಪ್ರದರ್ಶನ ನಡೆಸಿಕೊಟ್ಟರು.
ಗಾಯಕರಾದ ಡಾ. ಬಿ.ಆರ್. ಶಿವಕುಮಾರ್, ರಾಜೇಶ್, ಚಿರು ಸತೀಶ್, ಶ್ಯಾಮ್ ಸುಂದರ್, ಅವಿನಂ ಬೈರಾವ್, ಯೋಗಿ, ಪುಟ್ಟ, ಶಿವರಾಜ್, ಅವಿ, ಶ್ರೀಧರ್, ಸತೀಶ್, ದಯಾನಂದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.