ADVERTISEMENT

ನನ್ನ ಬಲಿದಾನ ಮಾಡ್ತಾನಂತಾ? ತಾಕತ್ ಇದ್ರೆ ಬರೋಕೆ ಹೇಳ್ರಿ ಅವನಿಗೆ: ಸುರೇಶ್ ಗುಡುಗು

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 13:56 IST
Last Updated 18 ಜನವರಿ 2020, 13:56 IST
   

ರಾಮನಗರ: ‘ನನ್ನ ಬಲಿದಾನ ಮಾಡುತ್ತೇನೆ ಎನ್ನುವವರು ಮೊದಲು ಅವರ ಬಲಿದಾನಕ್ಕೂ ಸಿದ್ಧರಿರಬೇಕು' ಎಂದು ಸಂಸದ ಡಿ.ಕೆ. ಸುರೇಶ್ ಅವರು ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ತಿರುಗೇಟು ನೀಡಿದರು.

ಶನಿವಾರ ಪತ್ರಕರ್ತರ ಜತೆ‌ ಮಾತನಾಡಿ, ‘ಅವರದ್ದು ಒಂದು ರಾಜಕೀಯ ಪಕ್ಷ. ಆ ಪಕ್ಷದ ಹಿನ್ನೆಲೆ ಗಾಯಕ ಅವರು. ಯಾರೂ ನನ್ನನ್ನು ಏನೂ ಮಾಡೋಕೆ ಆಗೋದಿಲ್ಲ. ನನ್ನ ಬಲಿದಾನ ಮಾಡ್ತಾನಂತಾ?ಅವನಿಗೆ ತಾಕತ್ ಇದ್ರೆ ಬರೋಕೆ ಹೇಳ್ರಿ’ ಎಂದು ಸವಾಲು ಹಾಕಿದರು.

‘ದೇಶದಲ್ಲಿ ಎಲ್ಲರಿಗೂ ಬದುಕುವ ಸಮಾನ ಹಕ್ಕನ್ನು ಸಂವಿಧಾನ ನೀಡಿದೆ. ಎಲ್ಲ ಜಾತಿ- ಧರ್ಮದವರೂ ಇಲ್ಲಿದ್ದಾರೆ. ಇದು ಯಾರೋ ಒಬ್ಬರ ಸ್ವತ್ತಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಬಿಜೆಪಿಯವರು ರಾಮನಗರದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ಬಾನಂದೂರು ಅಭಿವೃದ್ದಿಗೆಂದು ₹25 ಕೋಟಿ‌ ಬಿಡುಗಡೆ ಮಾಡಿತ್ತು. ಹೊಸ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಭೆ ಕರೆಯಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.