ADVERTISEMENT

ದರೋಡೆಕೋರರ ಮಾತು ನಂಬಬೇಡಿ: ಡಿ.ಕೆ ಸಹೋದರರ ವಿರುದ್ಧ ಎಚ್‌ಡಿಕೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 15:21 IST
Last Updated 6 ಅಕ್ಟೋಬರ್ 2024, 15:21 IST
<div class="paragraphs"><p>ಡಿ. ಕೆ. ಶಿವಕುಮಾರ್ ಮತ್ತು ಹೆಚ್‌.ಡಿ. ಕುಮಾರಸ್ವಾಮಿ</p></div>

ಡಿ. ಕೆ. ಶಿವಕುಮಾರ್ ಮತ್ತು ಹೆಚ್‌.ಡಿ. ಕುಮಾರಸ್ವಾಮಿ

   

ಚನ್ನಪಟ್ಟಣ: ‘ಉಪ ಚುನಾವಣೆ ಕಾರಣಕ್ಕೆ ಚನ್ನಪಟ್ಟಣಕ್ಕೆ ಬಂದವರು ಅಭಿವೃದ್ಧಿ ಹೆಸರಿನಲ್ಲಿ ನಿಮ್ಮನ್ನು ಮರುಳು ಮಾಡುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೆ ಅವರು ಇತ್ತ ತಿರುಗಿಯೂ ನೋಡುತ್ತಿರಲಿಲ್ಲ. ದರೋಡೆ ಮಾಡುವವರ ಮಾತು ನಂಬಬೇಡಿ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ತಾಲ್ಲೂಕಿನಲ್ಲಿ ವಿವಿಧೆಡೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.    

ADVERTISEMENT

ಚುನಾವಣೆ ಕಾರಣಕ್ಕೆ ನಿವೇಶನ, ಮನೆ ಕೊಡುವ ಆಸೆ ತೋರಿಸುವ ಅವರ ಆಟ ಚುನಾವಣೆ ಮುಗಿದ ಬಳಿಕ ನಿಲ್ಲುತ್ತದೆ. ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸಿದ್ದೇನೆ ಎನ್ನುತ್ತಾರೆ. ಎಲ್ಲಿದೆ ಅನುದಾನ? ಒಂದು ರೂಪಾಯಿ ಕೂಡ ಬಂದಿಲ್ಲ. ಮೂರು ತಿಂಗಳಲ್ಲಿ 20 ಸಲ ಚನ್ನಪಟ್ಟಣಕ್ಕೆ ಬಂದವರಿಗೆ ರಸ್ತೆಗುಂಡಿ ಮುಚ್ಚಿಸಲೂ ಆಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

‘ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುವಂತೆ ನಿಖಿಲ್‌ಗೆ ಹೇಳಿದೆ. ಆತ ನಿರಾಕರಿಸಿದ. ಜನತಾದಳ ಮುಗಿಸಲೇಬೇಕು ಎನ್ನುತ್ತಿದ್ದವರಿಗೆ ಉತ್ತರ ಕೊಡಬೇಕಿತ್ತು. ಕಡೆಗೆ  ನಾನು ಅಲ್ಲಿಗೆ ಹೋಗಬೇಕಾಯಿತು. ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಅಭ್ಯರ್ಥಿಯಾಗುತ್ತಾನೋ ಅಥವಾ ಇಲ್ಲವೋ ಎಂದು ಎರಡೂ ಪಕ್ಷಗಳ ನಾಯಕರು  ತೀರ್ಮಾನಿಸುತ್ತೇವೆ’ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.