ADVERTISEMENT

ಹಾರೋಹಳ್ಳಿ: ರಸ್ತೆ ಮಾಡುವ ನೆಪದಲ್ಲಿ ಸ್ಮಶಾನ ಭೂಮಿ ಒತ್ತುವರಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:50 IST
Last Updated 22 ನವೆಂಬರ್ 2024, 4:50 IST
ಹಾರೋಹಳ್ಳಿ ತಾಲ್ಲೂಕಿನ ಚಿಕ್ಕ ಸಾದೇನಹಳ್ಳಿ ಗ್ರಾಮದ ಸ್ಮಶಾನ ಒತ್ತುವರಿ ಜಾಗಕ್ಕೆ ಜಿಲ್ಲಾ ಕೆಡಿಪಿ ಸದಸ್ಯ ಎನ್.ಸಿ ಗುರುಮೂರ್ತಿ ಭೇಟಿ ನೀಡಿದರು
ಹಾರೋಹಳ್ಳಿ ತಾಲ್ಲೂಕಿನ ಚಿಕ್ಕ ಸಾದೇನಹಳ್ಳಿ ಗ್ರಾಮದ ಸ್ಮಶಾನ ಒತ್ತುವರಿ ಜಾಗಕ್ಕೆ ಜಿಲ್ಲಾ ಕೆಡಿಪಿ ಸದಸ್ಯ ಎನ್.ಸಿ ಗುರುಮೂರ್ತಿ ಭೇಟಿ ನೀಡಿದರು    

ಹಾರೋಹಳ್ಳಿ: ರಸ್ತೆ ಮಾಡುವ ನೆಪದಲ್ಲಿ ದಲಿತರಿಗೆ ಸೇರಿದ ಸ್ಮಶಾನ ಒತ್ತುವರಿ ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಲ್ಲೂಕಿನ ಚಿಕ್ಕಸಾದೇನಹಳ್ಳಿ ಸರ್ವೆ ನಂ 14ರಲ್ಲಿ 2 ಎಕರೆ ಜಮೀನು ಪಹಣಿಯಲ್ಲಿ ಪರಿಶಿಷ್ಟ ಜಾತಿ ಸ್ಮಶಾನ ಎಂದು ನಮೂದಾಗಿದೆ. ಈ ಜಾಗದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಶವ ಅಂತ್ಯ ಸಂಸ್ಕಾರ ಮಾಡಿದ್ದು ಈಚೆಗೆ ರಸ್ತೆ ಮಾಡುವ ನೆಪದಲ್ಲಿ ಭೂಮಿಯನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿದ್ದು ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸ್ಮಶಾನ ಒತ್ತುವರಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋ‍ಪಿಸಿದ್ದಾರೆ.

ADVERTISEMENT

ಕೆಡಿಪಿ ಸದಸ್ಯರ ಭೇಟಿ: ಚಿಕ್ಕಸಾದೇನಹಳ್ಳಿ ದಲಿತರ ಸ್ಮಶಾನ ಒತ್ತುವರಿಗೆ ಸಂಬಂಧಪಟ್ಟಂತೆ ಜಿಲ್ಲಾ ಕೆಡಿಪಿ ಸದಸ್ಯ ಎನ್.ಸಿ ಗುರುಮೂರ್ತಿ ಅವರ ಗಮನಕ್ಕೆ ತಂದಾಗ ಸ್ಮಶಾನ ಜಾಗಕ್ಕೆ ತೊಂದರೆ ಕೊಡಬಾರದು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಲಿಡ್ಕರ್ ಸಮಿತಿ ಜಿಲ್ಲಾ ನಿರ್ದೇಶಕ ವರದರಾಜು, ಮೇಡಮಾರನಹಳ್ಳಿ ಶಿವರಾಜು, ಗ್ರಾಮಸ್ಥರಾದ ಅಶ್ವಥ್, ಸಿಡ್ಲಯ್ಯ ಶಿವಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.