ಕಿಕ್ಕೇರಿ: ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ರೈತರ ಜಮೀನಿಗೆ ಬೆಂಕಿ ಕಿಡಿ ತಗುಲಿ ಭಾರಿ ಪ್ರಮಾಣದಲ್ಲಿ ತೆಂಗಿನ ಗಿಡಗಳು ಸುಟ್ಟು ಕರಕಲಾಗಿದೆ.
ದಾರಿಹೋಕರು ಬೀಡಿ ಸೇದಿ ಎಸೆದ ಬೆಂಕಿಗೆ ಈ ಅನಾಹುತ ಸಂಭವಿಸಿದೆ ಎಂದು ರೈತರು ಅಭಿಪ್ರಾಯಿಸಿದ್ದಾರೆ. ಬೇಸಿಗೆಯ ಬಿಸಿಲಿನ ಝಳಕ್ಕೆ ಆಸುಪಾಸಿನ ಐದಾರು ಜಮೀನುದಾರರ ಜಮೀನಿನಲ್ಲಿದ್ದ ತೆಂಗು, ಅಡಿಕೆ ಸುಟ್ಟು ಭಸ್ಮವಾಗಿದೆ.
ಗ್ರಾಮದ ಹೊರವಲಯದಲ್ಲಿರುವ ನಾಗಮ್ಮ ಪುಟ್ಟೇಗೌಡರ 22 ಗುಂಟೆ ಜಮೀನಿನಲ್ಲಿದ್ದ 40 ತೆಂಗಿನ ಸಸಿ, 20 ಅಡಿಕೆ ಮರಕ್ಕೆ ಹಾನಿಯಾಗಿದೆ. ದೊಡ್ಡಬೋರೇಗೌಡರ ಕೆ.ಬಿ. ನಿಂಗರಾಜು ಜಮೀನಿನ 40 ತೆಂಗಿನ ಮರ, ಕೆ.ಎನ್. ದೇವರಾಜೇಗೌಡರ ಸುಶೀಲಮ್ಮ ಜಮೀನಿನ 20 ತೆಂಗು, ರಾಜೇಗೌಡರ ಕೆ.ಆರ್. ಲೋಹಿತ್ ಜಮೀನಿನಲ್ಲಿದ್ದ 3 ತೆಂಗಿನ ಮರ,10 ತೆಂಗಿನ ಸಸಿ ಸಂಪೂರ್ಣ ನಾಶವಾಗಿದೆ.
ವಿಷಯ ತಿಳಿದ ತಾಲೂಕು ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ಶಿವಣ್ಣ, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಶ್ರೀಕಾಂತ್, ಓಂಕಾರ್ ಪಾಟೀಲ್, ಶ್ರೀಶೈಲ ಕುದರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.