ADVERTISEMENT

ಹೋಟೆಲ್‌ಗೆ ನುಗ್ಗಿದ ನೀರು: ದಿನಸಿ ವಸ್ತುಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:37 IST
Last Updated 23 ಅಕ್ಟೋಬರ್ 2024, 5:37 IST
ಮಾಗಡಿಯ ಬಾಚೇನಟ್ಟಿ ಗ್ರಾಮದ ಮಾಗಡಿ ಕೆಂಪೇಗೌಡ ಹಳ್ಳಿ ಹೋಟೆಲ್‌ಗೆ ನೀರು ನುಗ್ಗಿದೆ
ಮಾಗಡಿಯ ಬಾಚೇನಟ್ಟಿ ಗ್ರಾಮದ ಮಾಗಡಿ ಕೆಂಪೇಗೌಡ ಹಳ್ಳಿ ಹೋಟೆಲ್‌ಗೆ ನೀರು ನುಗ್ಗಿದೆ   

ಮಾಗಡಿ: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ತಾಲ್ಲೂಕಿನ ಬಾಚೇನಟ್ಟಿ ಗ್ರಾಮದ ಸಮೀಪದಲ್ಲಿರುವ ಮಾಗಡಿ ಕೆಂಪೇಗೌಡ ಹಳ್ಳಿ ಬಾಡೂಟ ಹೋಟೆಲ್‌ಗೆ ಮಳೆ ನೀರು ನುಗ್ಗಿದೆ. ಎರಡೂವರೆ ಲಕ್ಷ ಮೌಲ್ಯದ ದಿನಸಿ ವಸ್ತುಗಳು ಹಾಳಾಗಿದೆ. ಹೋಟೆಲ್‌ನಲ್ಲಿದ್ದ ಫ್ರಿಜ್‌, ಎಲೆಕ್ಟ್ರಿಕ್ ವಸ್ತುಗಳು ಕೂಡ ಹಾಳಾಗಿದೆ ಎಂದು ಹೋಟೆಲ್‌ ಮಾಲಿಕ ಶಿವಮೂರ್ತಿ ಹೇಳಿದರು.

ಮಳೆಯಿಂದ ಪಟ್ಟಣದ ಕೆಂಪೇಗೌಡ ಬಡಾವಣೆ (ಗದ್ದೆಬಯಲು)ಗೆ ನೀರು ನುಗ್ಗಿದೆ. ರಾಜಕಾಲವೆ ನೀರು ರಸ್ತೆಯಲ್ಲಿ ಹರಿಯಿತು. ಗೌರಮ್ಮನ ಕೆರೆ ಕೋಡಿಯಾಗಿದ್ದು ರಾಜಕಾಲುವೆ ನೀರು ದೊಡ್ಡ ಮೋರಿಯಲ್ಲಿ ಹೋಗುವ ಬದಲು ಚಿಕ್ಕ ಮೋರಿಯಲ್ಲಿ ಹರಿಯುತ್ತಿದೆ.

ADVERTISEMENT

ಹಾನಿಯಾದ ಪ್ರದೇಶಕ್ಕೆ ಮುಖ್ಯ ಅಧಿಕಾರಿ ಭೇಟಿ: ನೀರು ನುಗ್ಗಿ ಹಾನಿಯಾದ ಪ್ರದೇಶಕ್ಕೆ ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ಹಾಗೂ ಪುರಸಭೆ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ ಭೇಟಿ ನೀಡಿದರು. ನೀರನ್ನು ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ. ಯಂತ್ರಗಳ ಮೂಲಕ ತಗ್ಗು ಪ್ರದೇಶಗಳಿಗೆ ನೀರು ಬರದಂತೆ ತಾತ್ಕಾಲಿಕ ಪರಿಹಾರ ಮಾಡಲಾಗುತ್ತಿದೆ.

ವಾರ್ ರೂಂ ಆರಂಭ: ಮಳೆ ಹಾನಿ ಹಿನ್ನೆಲೆಯಲ್ಲಿ ವಾರ್ ರೂಂ ಆರಂಭಿಸಲಾಗಿದೆ. ಹಾನಿ ಉಂಟಾದರೆ 9164970009 ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಶರತ್ ಕುಮಾರ್ ತಿಳಿಸಿದ್ದಾರೆ.

ಮಾಗಡಿ ಪಟ್ಟಣದಲ್ಲಿ ಭಾರಿ ಪ್ರಮಾಣದ ಮಳೆ ಬಂದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ನುಗ್ಗಿರುವ ನೀರು
ಮಾಗಡಿಯಲ್ಲಿ ಮಳೆಯಿಂದ ಹಾನಿಯಾದ ಬಡಾವಣೆಗೆ ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.