ADVERTISEMENT

ರಾಮನಗರ: ಟ್ರೇಡಿಂಗ್‌ ಹೆಸರಲ್ಲಿ ವ್ಯಾಪಾರಿಗೆ ₹80 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 16:20 IST
Last Updated 17 ನವೆಂಬರ್ 2024, 16:20 IST
<div class="paragraphs"><p>ವಂಚನೆ</p></div>

ವಂಚನೆ

   

ರಾಮನಗರ: ಆನ್‌ಲೈನ್ ವಂಚಕರ ಬಲೆಗೆ ಸಿಲುಕಿದ ನಗರದ ವ್ಯಾಪಾರಿಯೊಬ್ಬರು ಬರೋಬ್ಬರಿ ₹80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಕೂರಂ ಪಾಷಾ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವ್ಯಾಪಾರಿ.   

ADVERTISEMENT

ವಂಚಕರು ವ್ಯಾಪಾರಿಯ ಮೊಬೈಲ್‌ ನಂಬರ್ ಪಡೆದು ವಾಟ್ಸ್ ಆಪ್ ಗ್ರೂಪ್ ಗೆ ಸೇರಿಸಿದ್ದರು. ಅದರಲ್ಲಿ ಜೆರೋದಾ (zerodha) ಓಟಿಸಿ ಅಕೌಂಟ್ ಮಾಡಿಸಿದರು. ಅದರಲ್ಲಿ ಬಂದ ಸೂಚನೆ ಅನುಸರಿಸಿದ ವ್ಯಾಪಾರಿಯು ಟ್ರೇಡಿಂಗ್‌ಗಾಗಿ ವಂಚಕರು ತಿಳಿಸಿದ ವಿವಿಧ ಬ್ಯಾಂಕ್ ಅಕೌಂಟ್ ನಂಬರ್‌ಗಳಿಗೆ ಹಂತಹಂತವಾಗಿ ₹80,34,563 ಹಣ ಹಾಕಿದ್ದಾರೆ.

ಕೊನೆಗೆ ಮೋಸ ಹೋಗಿರುವುದು ಗೊತ್ತಾಗಿ ವಂಚಕರ ವಿರುದ್ಧ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.