ADVERTISEMENT

ಕನಕಪುರ | ಗೌರಿ–ಗಣೇಶ ಹಬ್ಬ: ದೇಗುಲ ಮಠದಿಂದ ಗುರು ಕೋರಣ್ಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 5:05 IST
Last Updated 9 ಸೆಪ್ಟೆಂಬರ್ 2024, 5:05 IST
ಕನಕಪುರ ದೇಗುಲ ಮಠದಲ್ಲಿ ಗುರುಕೋರಣ್ಯಕ್ಕೆ ಮುಮ್ಮಡಿ ನಿರ್ವಾಣ ಸ್ವಾಮೀಜಿ ಚಾಲನೆ ನೀಡಿದರು
ಕನಕಪುರ ದೇಗುಲ ಮಠದಲ್ಲಿ ಗುರುಕೋರಣ್ಯಕ್ಕೆ ಮುಮ್ಮಡಿ ನಿರ್ವಾಣ ಸ್ವಾಮೀಜಿ ಚಾಲನೆ ನೀಡಿದರು   

ಕನಕಪುರ: ದೇಗುಲ ಮಠದ ಹಿರಿಯಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ನೇತೃತ್ವದಲ್ಲಿ ಗೌರಿ–ಗಣೇಶ ಹಬ್ಬದ ಗುರು ಕೋರಣ್ಯ ಎರಡು ದಿನಗಳ ಕಾಲ ನಗರದಲ್ಲಿ ನಡೆಯಿತು.

ಗೌರಿ–ಗಣೇಶ ಹಬ್ಬದಲ್ಲಿ ಮಠದ ಭಕ್ತರ ಮನೆಗಳಿಗೆ ತೆರಳಿ ಗುರು ಕೋರಣ್ಯ ಮಾಡುವುದು ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಸಂಪ್ರದಾಯ. ಅದರಂತೆ ಈ ವರ್ಷ ದೇಗುಲ ಮಠದಿಂದ ಗುರು ಕೋರಣ್ಯ ನಡೆಸಿದರು‌.

ದೇಗುಲಮಠದ ಕಿರಿಯ ಚನ್ನಬಸವ ಸ್ವಾಮೀಜಿ, ಬಿಲ್ವಪತ್ರೆ ಮಠದ ಶಿವಲಿಂಗ ಸ್ವಾಮೀಜಿ, ಮರಳವಾಡಿ ಮಠದ ಕಿರಿಯಶ್ರೀ ಪ್ರಭು ಕಿರೀಟ ಸ್ವಾಮೀಜಿ, ಅತ್ತಿಹಳ್ಳಿ ಮಠದ ಕಿರಿಯಶ್ರೀ ನಿರಂಜನ ಸ್ವಾಮೀಜಿ, ತೋಟಳ್ಳಿ ಮಠದ ಬಸವಪ್ರಭು ಸ್ವಾಮೀಜಿ ಕನಕಪುರ ನಗರದಲ್ಲಿ ಗುರು ಕೋರಣ್ಯ ನಡೆಸಿದರು.

ADVERTISEMENT

ಐವರು ಸ್ವಾಮೀಜಿ 5 ತಂಡಗಳಾಗಿ ಕೋಟೆ, ಕೆಂಕೇರಮ್ಮ ಬಡಾವಣೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ, ಮಹದೇಶ್ವರ ಬಡಾವಣೆ, ಮುನಿಸಿಪಲ್ ಹೈಸ್ಕೂಲ್, ಶಿಕ್ಷಕರ ಭವನ ರಸ್ತೆ, ನಿರ್ವಹಣೆಶ್ವರ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಭಕ್ತರಿಂದ ಧವಸ–ಧಾನ್ಯ, ಹಣ್ಣು, ತರಕಾರಿ ಇತ್ಯಾದಿ ಪರಿಕರ ಸ್ವೀಕರಿಸಿದರು.

ಕೋರಣ್ಯದ ವೇಳೆ ಭಜನೆ ತಂಡಗಳು ಜೊತೆಯಲ್ಲಿದ್ದು ಕೋರಣ್ಯಕ್ಕೆ ಸಹಕಾರ ನೀಡಿದರು‌. ದೇಗುಲ ಮಠದ ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ನೌಕರರು ಹಾಗೂ ವೀರಶೈವ ತರುಣರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.