ADVERTISEMENT

ಗ್ಯಾಸ್ ಸಿಲಿಂಡರ್ ಸೋರಿಕೆ: ಪೀಠೋಪಕರಣ ಭಸ್ಮ

ಕಳಪೆ ರೆಗ್ಯುಲೇಟರ್‌ ಬಳಕೆಯಿಂದ ಅನಿಲ ಸೋರಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 5:20 IST
Last Updated 12 ಆಗಸ್ಟ್ 2024, 5:20 IST

ಬಿಡದಿ: ಪಟ್ಟಣದ ಕೇತಗಾನಹಳ್ಳಿ ರಸ್ತೆಯ ರಾಘವೇಂದ್ರ ಬಡಾವಣೆಯಲ್ಲಿ ಭಾನುವಾರ ಅಡುಗೆ ಅನಿಲ ಸಿಲಿಂಡರ್‌ ಸೋರಿ ಬೆಂಕಿ ಹತ್ತಿಕೊಂಡಿದ್ದು, ಮನೆಯಲ್ಲಿದ್ದ ಪೀಠೋಪಕರಣ ಭಸ್ಮವಾಗಿವೆ. 

ಬಡಾವಣೆಯ ಉಮೇಶ್ ಎಂಬುವರ ಮನೆಯಲ್ಲಿ ಸಿಲಿಂಡರ್‌ ಸೋರಿ ಬೆಳಗಿನ ಜಾವ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಮನೆಯಲ್ಲಿದ್ದವರು ಹೊರಗೆ ಬಂದಿದ್ದಾರೆ. 

ಉಮೇಶ್ ಅವರ ತಾಯಿ ನಂಜಮ್ಮ ಅವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿದ್ದ ಪೀಠೋಪಕರಣ, ಎಲೆಕ್ಟ್ರಾನಿಕ್ ಉಪಕರಣ ಬೆಂಕಿಗೆ ಆಹುತಿಯಾಗಿವೆ. ಕಳಪೆ ಗುಣಮಟ್ಟದ ಗ್ಯಾಸ್ ರೆಗ್ಯುಲೇಟರ್ ಬಳಕೆ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 

ADVERTISEMENT

ಕೂಡಲೇ ಸ್ಥಳೀಯರು ಪೆಟ್ರೋಲ್ ಬಂಕ್‌ನಿಂದ ಅಗ್ನಿ ನಿರೋಧಕ ಸಾಧನ ತಂದು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.