ADVERTISEMENT

ಮಾಗಡಿ: ಸರ್ಕಾರಿ ನೌಕರರ ಸಂಘದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 4:43 IST
Last Updated 29 ಅಕ್ಟೋಬರ್ 2024, 4:43 IST
ಮಾಗಡಿ ತಾಲ್ಲೂಕು ಸರ್ಕಾರಿ ನೌಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರು
ಮಾಗಡಿ ತಾಲ್ಲೂಕು ಸರ್ಕಾರಿ ನೌಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರು   

ಮಾಗಡಿ: ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು.

ಪಟ್ಟಣದ ಜಿಕೆಬಿಎಂಎಸ್ ಶಾಲಾವರಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಮತ ಎಣಿಕೆ ಕಾರ್ಯ ನಡೆಸಿ ವಿಜೇತರ ಪಟ್ಟಿ ಬಿಡುಗಡೆ ಮಾಡಲಾಯಿತು.

ಸರ್ಕಾರಿ ಪ್ರಾಥಮಿಕ ಶಾಲಾ ನಿರ್ದೇಶಕರ ಚುನಾವಣೆಯಲ್ಲಿ ಶಿಕ್ಷಕ ಬಿ.ಎನ್. ಜಯರಾಮು 413, ಜಿ.ಎಲ್. ನರಸಿಂಹಯ್ಯ, 397 ಮಲ್ಲೂರು ಎಂ.ಕೆ. ಲೋಕೇಶ್ 344 ಮತ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಣ್ಣೇಗೌಡ 100, ಎಚ್.ಎನ್. ವಿಜಯಲಕ್ಷ್ಮಿ 78 ಮತ. ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಜಿ.ನಾರಾಯಣ್ 10, ಅರಣ್ಯ ಇಲಾಖೆ- ಉಮೇಶ್ 11, ತಾಲೂಕು ಪಂಚಾಯಿತಿ ಆಡಳಿತ ಸಿಬ್ಬಂದಿ ಎನ್.ಶಿವಕುಮಾರ್ 51, ಕೆ.ಕಾಂತರಾಜು 44 ನ್ಯಾಯಾಂಗ ಇಲಾಖೆ-ಗೋವಿಂದರಾಜು 40 ಮತ ಪಡೆದು ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜಗೋಪಾಲ್ ತಿಳಿಸಿದ್ದಾರೆ.

ADVERTISEMENT

ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ವಿವಿಧ ಇಲಾಖೆಗಳಲ್ಲಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಕೆಲವು ಇಲಾಖೆಗಳಲ್ಲಿ ಮತದಾನ ನಡೆದಿದೆ.

ಅವಿರೋಧ ಆಯ್ಕೆಯಾದರು: ಕೃಷಿ ಇಲಾಖೆ-ವಿಜಯ ಸವಣ್ಣೂರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ -ಡಾ.ಜಗದೀಶ್‌ರೆಡ್ಡಿ, ಕಂದಾಯ ಇಲಾಖೆ- ನರೇಶ್, ಎಂ.ಚಂದ್ರಶೇಖರ್, ಲೋಕೋಪಯೋಗಿ ಇಲಾಖೆ ಎನ್.ಯೋಗೀಶ್,  ಪಂಚಾಯತ್ ರಾಜ್ ಇಲಾಖೆ- ಬಿ.ಆರ್.ರವಿ, ಪ್ರೌಢಶಾಲೆ-ಎಂ. ಮಂಜುನಾಥ್, ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳು- ಆರ್. ರಮೇಶ್, ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳು- ಧರಣೇಶ್ ಬಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ- ಗುಣಶೇಖರ್ ಆರ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ- ಸಿ.ಎಚ್‌.ಕೇಶವಮೂರ್ತಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ-ಸುಲ್ತಾನ್‌ಬಾಬ, ಖಜಾನೆ ಇಲಾಖೆ-ಬಸವರಾಜು, ಭೂ ಮಾಪನ ಕಂದಾಯ ಭೂದಾಖಲೆಗಳು ಹಾಗೂ ನೋಂದಣಿ ಮುದ್ರಾಂಕ ಇಲಾಖೆ-ಜಗದೀಶ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ತಾಲ್ಲೂಕು ಪಂಚಾಯಿತಿ ಕಚೇರಿ ಟಿ.ಎಸ್.ಭರತ್,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ಎಸ್.ಮಂಜುಳಾ,
ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆ-ಚೇತನ್, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ, ನಗರಾಭಿವೃದ್ಧಿ ಪೌರಾಡಳಿತ. ಆಹಾರ ಮತ್ತು ನಾಗರೀಕ ಸರಬರಾಜು- ಡಾ.ಎಂ.ಜಿ.ಗೀತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.