ADVERTISEMENT

ಹಾರೋಹಳ್ಳಿ: ಸರ್ಕಾರಿ ಜಾಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 15:26 IST
Last Updated 8 ನವೆಂಬರ್ 2024, 15:26 IST
ಹಾರೋಹಳ್ಳಿ ತಾಲೂಕು ಗೊಲ್ಲಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತಹಶೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು
ಹಾರೋಹಳ್ಳಿ ತಾಲೂಕು ಗೊಲ್ಲಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತಹಶೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು   

ಹಾರೋಹಳ್ಳಿ: ತಾಲೂಕಿನ ಕೊಟ್ಟಗಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿ ಸರ್ವೆ ನಂ.111ರ ಸರ್ಕಾರಿ ಜಾಗ ಒತ್ತುವರಿಯನ್ನು ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಯಿಂದ ತೆರವುಗೊಳಿಸಲಾಯಿತು.

ಶುಕ್ರವಾರ ಮಧ್ಯಾಹ್ನ ತಹಶೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ ಅಧ್ಯಕ್ಷ ಪಿಚ್ಚನಕೆರೆ ಜಗದೀಶ್ ಅವರ ನೇತೃತ್ಚದಲ್ಲಿ ತೆರವು ಕಾರ್ಯಾಚರಣೆ ನಡೆಸಿಯಿತು. ಸರ್ಕಾರಿ ಗೋಮಾಳದಲ್ಲಿ ಒತ್ತುವರಿಯಾಗಿದ್ದ 1ಎಕರೆ 4 ಕುಂಟೆ ಜಾಗವನ್ನು ತೆರವುಗೊಳಿಸಿ ವಶಕ್ಕೆ ತೆಗೆದುಕೊಳ್ಳಲಾಯಿತು.

ಸಿದ್ದರಾಜು ಬಿನ್ ಭೈರಪ್ಪ ಹಾಗೂ ಕರಿಯಪ್ಪ ಎಂಬುವವರಿಗೆ ತಲಾ 1 ಎಕರೆ 30 ಗುಂಟೆ ಮಂಜೂರಾಗಿ ಖಾತೆಯನ್ನು ಸಹ ಮಾಡಿಕೊಳ್ಳಲಾಗಿತ್ತು. ಖಾತೆ ಮಾಡುವಾಗ ಮೂಲ ದಾಖಲೆ, ನಕಾಶೆಗಳನ್ನು ಪರಿಶೀಲಿಸದೆ ಅಕ್ರಮ ಖಾತೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ದೂರು ನೀಡಿದ್ದರು.

ADVERTISEMENT

ಕಂದಾಯ ನಿರೀಕ್ಷಕ ಅಶೋಕ್ ರಾಥೋಡ್, ಗ್ರಾಮ ಲೆಕ್ಕಾಧೀಕರಿ ಮೀನಾಕ್ಷಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಿವರಾಮ್, ಕಾರ್ಯದರ್ಶಿ ನಾಗಮಣಿ, ಎಸ್.ಡಿ.ಎ ಪುಟ್ಟಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.