ADVERTISEMENT

ಹಾರೋಹಳ್ಳಿ: ಹೃದಯಾಘಾತದಿಂದ ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 7:23 IST
Last Updated 30 ಅಕ್ಟೋಬರ್ 2024, 7:23 IST
ಹಾರೋಹಳ್ಳಿ -ಆನೇಕಲ್ ರಸ್ತೆಯ ಉರುಗನದೊಡ್ಡಿ ಬಳಿ ಆನೆ ಮೃತಪಟ್ಟಿರುವುದು
ಹಾರೋಹಳ್ಳಿ -ಆನೇಕಲ್ ರಸ್ತೆಯ ಉರುಗನದೊಡ್ಡಿ ಬಳಿ ಆನೆ ಮೃತಪಟ್ಟಿರುವುದು   

ಹಾರೋಹಳ್ಳಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿ ಉರುಗನದೊಡ್ಡಿ ಬಳಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದೆ.

ಸ್ಥಳಕ್ಕೆ ಬಂದ ವೈದ್ಯಾಧಿಕಾರಿಗಳು, ಪರೀಕ್ಷೆ ನಡೆಸಿ ಆನೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ವರದಿ ನೀಡಿದ್ದಾರೆ.

ಆನೆ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲಿದ್ದು ರಸ್ತೆ ದಾಟುವ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉರುಗನದೊಡ್ಡಿ ತಾಲ್ಲೂಕಿನ ಗಡಿ ಭಾಗವಾಗಿದ್ದು ಆನೇಕಲ್‌ಗೆ ಹೊಂದಿಕೊಂಡಂತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.