ADVERTISEMENT

ಹಾರೋಹಳ್ಳಿ: ತಹಶೀಲ್ದಾರ್ ವಿಜಿಯಣ್ಣ 9 ಮನೆಗಳ ಒಡೆಯ

ಹಾರೋಹಳ್ಳಿ ತಹಶೀಲ್ದಾರ್‌ ಬಳಿ ₹2.45 ಕೋಟಿ ಅಕ್ರಮ ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:16 IST
Last Updated 11 ಜುಲೈ 2024, 15:16 IST
<div class="paragraphs"><p>ತಹಶೀಲ್ದಾರ್ ವಿಜಿಯಣ್ಣ</p></div>

ತಹಶೀಲ್ದಾರ್ ವಿಜಿಯಣ್ಣ

   

ಹಾರೋಹಳ್ಳಿ: ಇಲ್ಲಿನ ತಹಶೀಲ್ದಾರ್ ವಿಜಿಯಣ್ಣ ಬರೋಬ್ಬರಿ 9 ಮನೆಗಳ ಒಡೆಯನಾಗಿದ್ದು, ₹3.56 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಅವರ ಮನೆ, ಕಚೇರಿ ಸೇರಿದಂತೆ 6 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದಾಗ ಈ ಅವರ ಆಸ್ತಿ ವಿವರ ಬಹಿರಂಗಗೊಂಡಿದೆ.

ಪೊಲೀಸರ ದಾಳಿ ಸಂದರ್ಭದಲ್ಲಿ ವಿಜಿಯಣ್ಣ ಅವರ ಮನೆಯಲ್ಲಿ ₹2.42 ಲಕ್ಷ ನಗದು, ₹22.57 ಲಕ್ಷ ಮೌಲ್ಯದ ಚಿನ್ನಾಭರಣ, ₹43.15 ಲಕ್ಷ ಮೌಲ್ಯದ ವಾಹನಗಳು ಹಾಗೂ ₹34 ಲಕ್ಷ ಮೌಲ್ಯದ ಗೃಹೋಪಯೋಗಿ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ. ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ 9 ಮನೆಗಳ ಜೊತೆಗೆ 13 ಎಕರೆ ಕೃಷಿಭೂಮಿ ಹೊಂದಿರುವುದು ಗೊತ್ತಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ADVERTISEMENT

ಲೋಕಾಯುಕ್ತ ಎಸ್‌ಪಿ ನೇತೃತ್ವದ ಅಧಿಕಾರಿಗಳ ತಂಡವು, ಬೆಳಿಗ್ಗೆಯೇ ಪಟ್ಟಣದಲ್ಲಿರುವ ವಿಜಿಯಣ್ಣ ಅವರ ಬಾಡಿಗೆ ನಿವಾಸ, ಕಚೇರಿ ಹಾಗೂ ಬೇರೆ ಕಡೆ ಹೊಂದಿರುವ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತು.ದಾಳಿಯಲ್ಲಿ ವಿಜಿಯಣ್ಣ ಅವರು ಆದಾಯ ಮೀರಿ ₹2.45 ಕೋಟಿ ಆಸ್ತಿಯನ್ನು ಅಕ್ರಮವಾಗಿ ಹೊಂದಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.