ADVERTISEMENT

ರಾತ್ರಿ ಸುರಿದ ಭಾರಿ ಮಳೆಗೆ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:23 IST
Last Updated 21 ಅಕ್ಟೋಬರ್ 2024, 16:23 IST
ಮಾಗಡಿ ತಾಲ್ಲೂಕಿನ ಕಾಳಾರಿ ಕೆರೆ ಕೋಡಿ ಹರಿಯಿತು
ಮಾಗಡಿ ತಾಲ್ಲೂಕಿನ ಕಾಳಾರಿ ಕೆರೆ ಕೋಡಿ ಹರಿಯಿತು   

ಮಾಗಡಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತಾಲ್ಲೂಕಿನಲ್ಲಿ ಸಾಕಷ್ಟು ಹಾನಿವುಂಟಾಗಿದೆ. ಮನೆ, ಜಮೀನು, ತೋಟಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಪಡುವಂತಾಗಿದೆ.

ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಹೆಚ್ಚುವರಿ ನೀರು ತೊರೆಯ ಮೂಲಕ ಬಂದ ಪರಿಣಾಮ ಚಿಕ್ಕತೊರೆ ಪಾಳ್ಯದ ಮೂರ್ತಿ ನಾಯಕ್ ಅವರ ಮನೆಗೆ ನೀರು ನುಗ್ಗಿದೆ. ರಾತ್ರಿಯಿಡೀ ಕುಟುಂಬಸ್ಥರು ಪರದಾಡಿದ್ದಾರೆ. ಏಳು ತಿಂಗಳ ಬಾಣಂತಿ ಕೂಡ ಮಗುವಿನೊಂದಿಗೆ ಆತಂಕದಲ್ಲೇ ರಾತ್ರಿ ಕಳೆದಿದ್ದಾರೆ. ಅಪಾರ ಪ್ರಮಾಣದ ವಸ್ತುಗಳು ಹಾನಿಗೆ ಒಳಗಾಗಿವೆ.

ತೋಟಕ್ಕೆ ನುಗ್ಗಿದ ನೀರು: ಹೊಸಪಾಳ್ಯ ಸಮೀಪ ತೊರೆ ಮಣ್ಣು ಕುಸಿದು ರೈತರ ಜಮೀನಿಗಳಿಗೆ ನೀರು ನುಗ್ಗಿದೆ. ಮರೂರು- ಚಿಕ್ಕಕಲ್ಯಾ ಸಂಪರ್ಕಿಸುವ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡಿದರು.

ADVERTISEMENT
 ಚಿಕ್ಕತೊರೆ ಪಾಳ್ಯದ ಮೂರ್ತಿ ನಾಯಕ್ ಅವರ ಮನೆಗೆ ನುಗ್ಗಿರುವ ಮಳೆ ನೀರು
ಹೊಸಪಾಳ್ಯ ಬಳಿ ರೈತರ ತೋಟಕ್ಕೆ ಮಳೆ ನೀರು ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.