ಮಾಗಡಿ: ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಗ್ರಾಮೀಣ ಯುವಕರಿಗೆ ಆರು ದಿನ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೆಸರಘಟ್ಟದ ಲೂಮಿನಿ ಫಾರ್ಮ್, ಬೀ ಫಾರ್ಕ್, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯಕ್ಕೆ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು. ತರಬೇತಿ ಪಡೆದ 15 ಅಭ್ಯರ್ಥಿಗಳಿಗೆ ಕೊನೆಯ ದಿನ ಪ್ರಮಾಣ ಪತ್ರ ವಿತರಿಲಾಯಿತು.
ಮ್ಯಾನೇಜ್ ಹೈದರಬಾದ್ ಸಹಯೋಗದಲ್ಲಿ ನಡೆದ ತರಬೇತಿಯಲ್ಲಿ ಉಪಕಸುಬಾಗಿ ಜೇನು ಸಾಕಾಣಿಕೆ, ರೈತರ ಆರ್ಥಿಕತೆ ಸುಧಾರಣೆಯಲ್ಲಿ ಜೇನು ಸಾಕಾಣಿಕೆ ಮಹತ್ವ ಕುರಿತು ತಿಳಿಸಿ ಕೊಡಲಾಯಿತು.
ಋತುಮಾನಗಳಲ್ಲಿ ಜೇನು ನಿರ್ವಹಣೆ, ರೋಗ ನಿರ್ವಹಣೆ, ಜೇನು ಉತ್ಪನ್ನಗಳಿಗೆ ಮಾರುಕಟ್ಟೆ, ಮಕರಂದ ಉತ್ಪಾದಿಸುವ ಹೂಗಳು ಮತ್ತು ಮಧುವನ ನಿರ್ವಹಣೆಯ ಇನ್ನೂ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಯಿತು.
ಜೇನು ನಿರ್ವಹಣೆ, ಪೂರಕ ಆಹಾರ ಸಿದ್ಧತೆ, ಸಾಕಣೆ ಉಪಕರಣ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಲತಾ ಆರ್. ಕುಲಕರ್ಣಿ, ಡಾ.ರಾಜೇಂದ್ರಪ್ರಸಾದ್, ಡಾ.ಈಶ್ವರಪ್ಪ, ಕೃಷಿ ವಿಶ್ವವಿದ್ಯಾನಿಲಯದ ಡಾ. ವಿಜಯಕುಮಾರ, ಡಾ.ದೀಪ ಪೂಜಾರ, ಡಾ.ಸೌಜನ್ಯ, ಪ್ರಗತಿಪರ ಕೃಷಿಕ ಅಶೋಕ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.