ADVERTISEMENT

ಮುಂದೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ಇದೆ: ಡಾ.ಸಿ.ಎನ್‌.ಮಂಜುನಾಥ್‌

ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್‌. ಮಂಜುನಾಥ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 6:02 IST
Last Updated 17 ಜೂನ್ 2024, 6:02 IST
ಕನಕಪುರ ನಗರದಲ್ಲಿ ನೂತನ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿದರು, ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು
ಕನಕಪುರ ನಗರದಲ್ಲಿ ನೂತನ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿದರು, ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು   

ಕನಕಪುರ: ‘ಕೇಂದ್ರದಲ್ಲಿ ಬಿಜೆಪಿಗೆ ಸರಳ ಬಹುಮತ ದೊರೆಯದ ಕಾರಣ ಮಿತ್ರಪಕ್ಷಗಳಿಗೂ  ಸಚಿವ ಸ್ಥಾನ ನೀಡಬೇಕಾಗಿ ಬಂತು. ಹಾಗಾಗಿ ನನಗೆ ಸಚಿವ ಸ್ಥಾನ ದೊರೆಯಲ್ಲ. ಮುಂದೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಯಿದೆ’ ಎಂದು ನೂತನ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಕನಕಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಜಾರು, ನಿರಾಶೆ ಇಲ್ಲ. ಸಂಸದನಾಗಿ ಕ್ಷೇತ್ರದಲ್ಲಿ ಮಾಡಬೇಕಿರುವ ಕೆಲಸ ಮಾಡುತ್ತೇನೆ’ ಎಂದರು.

’ನಾನು ಗೆದ್ದು ಕೇಂದ್ರದಲ್ಲಿ ಸಚಿವನಾಗುತ್ತೇನೆ ಎಂದು ಕ್ಷೇತ್ರದ ಜನರ ನಿರೀಕ್ಷೆ ಇತ್ತು. ಸದ್ಯಕ್ಕೆ ಸಾಧ್ಯವಾಗಲಿಲ್ಲ. ಹಾಗಂತ ಮುಂದೆ ಆ ನಿರೀಕ್ಷೆ ನೆರವೇರುವುದಿಲ್ಲ ಎಂದು ಹೇಳಲಾಗದು. ಕ್ಷೇತ್ರದ ಜನರ ನಿರೀಕ್ಷೆ ಈಡೇರುವ ಕಾಲ ಬರುತ್ತದೆ‘ ಎಂದರು.

ADVERTISEMENT

‘ರಾಮನಗರ ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಸಂಸದರ ಕಚೇರಿ  ತೆರೆದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡುವೆ’ ಎಂದು ಹೇಳಿದರು.

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಚಿನ್ನಸ್ವಾಮಿ, ಪುಟ್ಟರಾಜು, ಸ್ಟುಡಿಯೋ ಚಂದ್ರ, ಪಂಚಲಿಂಗೇಗೌಡ, ಕಾಳೇಗೌಡ, ಯೂನಿಸ್‌ ಅಲಿಖಾನ್‌, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಶಂಕರ್‌, ಪ್ರಮೋದ, ಚಿರಂಜೀವಿ, ಕಾಳರಾಜು, ಸುರೇಶ್‌, ಮರಳೆಸುರೇಶ್‌, ಕೆಬಿಎಸ್‌ ಗೌಡ, ಸೀರೇಗೌಡ, ಕಾಂತರಾಜು, ವರದರಾಜು, ಬೋರೇಗೌಡ, ಮಂಜುನಾಥ್‌, ಪ್ರದೀಪ, ಅಭಿಷೇಕ, ಕೃಷ್ಣ, ಆನಂದ್‌, ಕಿರಣ್‌, ಲಾಯರ್‌ ಅಭಿಷೇಕ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.