ADVERTISEMENT

ಬಿಡದಿ: ಸ್ಮಶಾನಕ್ಕೆ ಮೂಲಸೌಕರ್ಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:48 IST
Last Updated 27 ಸೆಪ್ಟೆಂಬರ್ 2024, 5:48 IST
ಕುರುಬರ ಕರೇನಹಳ್ಳಿ ಗ್ರಾಮದಲ್ಲಿ ಗಾಣಕಲ್ ನಟರಾಜ್, ಅನುಸೂಯ ರಮೇಶ ಹಾಗೂ ಸ್ಥಳೀಯ ಮುಖಂಡರು ಶಂಕುಸ್ಥಾಪನೆ
ಕುರುಬರ ಕರೇನಹಳ್ಳಿ ಗ್ರಾಮದಲ್ಲಿ ಗಾಣಕಲ್ ನಟರಾಜ್, ಅನುಸೂಯ ರಮೇಶ ಹಾಗೂ ಸ್ಥಳೀಯ ಮುಖಂಡರು ಶಂಕುಸ್ಥಾಪನೆ   

ಬಿಡದಿ: ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರ ಕರೇನಹಳ್ಳಿ ಮತ್ತು ಪುರಸಭೆ ವ್ಯಾಪ್ತಿಯ ವಾಜರಹಳ್ಳಿ ಗ್ರಾಮದಲ್ಲಿ ಗುರುವಾರ ಸ್ಮಶಾನಕ್ಕೆ ಕಾಂಪೌಂಡ್ ಹಾಗೂ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಎರಡೂ ಕಡೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ಸ್ಮಶಾನಕ್ಕೆ ಮೂಲಭೂತ ಸೌಕರ್ಯಗಳಾದ ಕಾಂಪೌಂಡ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಗಾಣಕಲ್ ನಟರಾಜ್, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯ ರಮೇಶ್, ಸದಸ್ಯರಾದ ಹೊಂಬೆಗೌಡ, ಕೃಷ್ಣ, ಹೊಂಬಯ್ಯ, ರೈತ ಮುಖಂಡ ರಂಗಸ್ವಾಮಿ, ಕಾಕರಮನಹಳ್ಳಿ ಶಿವಲಿಂಗಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT