ADVERTISEMENT

ಪ್ರಕೃತಿಯ ಮಡಿಲಲ್ಲಿ ವಿಶ್ವ ಯೋಗ ದಿನಚಾರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 5:33 IST
Last Updated 22 ಜೂನ್ 2024, 5:33 IST
ಯೋಗಾಭ್ಯಾಸ ಮಾಡುತ್ತಿರುವುದು
ಯೋಗಾಭ್ಯಾಸ ಮಾಡುತ್ತಿರುವುದು   

ಬಿಡದಿ: ಇಲ್ಲಿನ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಶ್ವ ಯೋಗ ದಿನಚಾರಣೆ ಅಂಗವಾಗಿ ಶುಕ್ರವಾರ ಬೆಳಗ್ಗೆ ನೆಲ್ಲಿಗುಡ್ಡೆ ಕೆರೆಯ ಬಳಿ ಯೋಗಾಭ್ಯಾಸ ನಡೆಯಿತು.

50ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ಬಿಡದಿ ಪೋಲಿಸ್ ಠಾಣೆಯ ಸಿಬ್ಬಂದಿ ಯೋಗಾಭ್ಯಾಸ ನಡೆಸಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅನಂತ್ ಮಾತನಾಡಿ, ಯೋಗ ಉಚಿತ, ಆರೋಗ್ಯ ಖಚಿತ ಎನ್ನುವ ಧ್ಯೇಯವಾಕ್ಯದೊಂದಿಗೆ ಪಂತಜಲಿ ಯೋಗ ಶಿಕ್ಷಣ ಸಮಿತಿಯು 45 ವರ್ಷಗಳಿಂದ ಉಚಿತವಾಗಿ ಯೋಗ ಶಿಬಿರಗಳನ್ನು ಆಯೋಸುತ್ತಿದೆ.  ಜೂನ್‌ 21ರಂದು ಭೂಮಿಯು ಉತ್ತರಾಯಣದಿಂದ ದಕ್ಷಿಣಾಯಾಣ ಕಡೆ ಕಾಲವು ಪ್ರಾರಂಭವಾಗುತ್ತದೆ. ಅಂದು ಭೂಮಿಯ ಮೇಲೆ ದೀರ್ಘಕಾಲ ಸೂರ್ಯನ ಬೆಳಕು ಬೀಳುವ ಕಾರಣ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತದೆ ಎಂದರು.

ADVERTISEMENT

ಬಿಡದಿ ಪೋಲಿಸ್ ಸಿಬ್ಬಂದಿ ಹನುಮಂತೇಗೌಡ, ಸಮಿತಿಯ ಧನಂಜಯ ಮತ್ತಿತರು ಹಾಜರಿದ್ದರು.

ಯೋಗಾಭ್ಯಾಸ ಮಾಡುತ್ತಿರುವುದು 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.