ADVERTISEMENT

ರಾಮನಗರ: 39 ಮಂದಿಗೆ ಲೋಕಶ್ರೀ ಪ್ರಶಸ್ತಿ ಪ್ರದಾನ

ಜಾನಪದ ಲೋಕದಲ್ಲಿ ಲೋಕೋತ್ಸವ ಸಂಭ್ರಮ; ನಿರ್ಮಲಾನಂದನಾಥ ಸ್ವಾಮೀಜಿ ಭಾಗಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 16:00 IST
Last Updated 13 ಮಾರ್ಚ್ 2021, 16:00 IST
ಕಾರ್ಯಕ್ರಮದಲ್ಲಿ ಕಲಾವಿದರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಇದ್ದರು
ಕಾರ್ಯಕ್ರಮದಲ್ಲಿ ಕಲಾವಿದರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಇದ್ದರು   

ರಾಮನಗರ: ಇಲ್ಲಿನ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನಾಡಿನ 39 ಕಲಾವಿದರಿಗೆ2021ನೇ ಸಾಲಿನ ಲೋಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

₹ 10 ಸಾವಿರ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡ ಪುರಸ್ಕಾರವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕಲಾವಿದರಿಗೆ ಪ್ರದಾನ ಮಾಡಿದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು ‘‘ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖ. ಬದುಕಿಗೆ ಎರಡೂ ಬೇಕು. ಆನಂದ ಮತ್ತು ನೆಮ್ಮದಿ ಇದ್ದರೆ ಬದುಕು ಹಸನಾಗುತ್ತದೆ’ ಎಂದು ಕಿವಿಮಾತು ಹೇಳಿದರು. ‘ಜನಪದ ಉಳಿಯದೇ ಹೋದರೆ ಮನುಷ್ಯನ ನೆಮ್ಮದಿ ಉಳಿಯುವುದಿಲ್ಲ. ಜನಪದ, ಕಲೆ, ಸಂಗೀತ ಈ ಎಲ್ಲವೂ ಬದುಕಿಗೆ ಬೇಕು’ ಎಂದರು.

ಪುರಸ್ಕೃತರು: ತುಮಕೂರು ಜಿಲ್ಲೆಯವರಾದ ಯಕ್ಷಗಾನ ಭಾಗವತ ಕಲ್ಮನೆ ನಂಜಪ್ಪ, ಶತಕಂ ಮಲ್ಲೇಶ್, ರಂಗಪ್ಪ. ಬೆಂಗಳೂರಿನವರಾದ ಡಾ.ಜೆ. ನಾರಾಯಣ, ಶ್ರೀನಿವಾಸ ಕಪ್ಪಣ್ಣ, ನೀಲಾಂಬಿಕಾ, ಟಾ.ಟಿ. ಗೋವಿಂದರಾಜು, ಜೋಗಿಲ ಸಿದ್ದರಾಜು. ಶಿಲ್ಪಾ ಮುಡಬಿ, ರಾಯಚೂರಿನ ದಂಡಮ್ಮ ಅಕ್ಕರಕಿ, ಲಂಕೆಪ್ಪ ಭಜಂತ್ರಿ, ಬೆಳಗಾವಿಯ ಮಲ್ಲಪ್ಪ ಅಪ್ಪಣ್ಣ ಕಕ್ಕೇರಿ, ಪುಂಡಲೀಕ ಸೈದಪ್ಪ ಮಾದರ, ಶಿವಲಿಂಗ ಪಾವಡಿ ಪೂಜೇರಿ.ದಕ್ಷಿಣ ಕನ್ನಡ ಜಿಲ್ಲೆಯ ಸೇಸಪ್ಪ ಪಂಬದ ಮಂಜನಾಡಿ, ರಾಮನಗರದ ಚಂದು, ಶಿವಲಿಂಗಯ್ಯ, ಸಿದ್ದರಾಜು, ಯಾದಗಿರಿಯ ಬಸಪ್ಪ, ಶಿವಮೊಗ್ಗದ ವಸಂತ ರಾವ್ ಕುಗ್ವೆ, ಹಾವೇರಿಯ ಮಲ್ಲಪ್ಪ ಚಿಂಚಲಿ, ವಿಜಯಪುರದ ವೀರಭದ್ರಪ್ಪ ಯಲ್ಲಪ್ಪ, ಶಿವಣ್ಣ ಬಿರಾದಾರ, ಮೈಸೂರಿನ ಚಿಕ್ಕತಾಯಮ್ಮ, ಮಾಸ್ತಮ್ಮ, ಬೀದರ್‌ನ ಶಂಭುಲಿಂಗ ವಾಲದೊಡ್ಡಿ, ಚಿಕ್ಕಮಗಳೂರಿನ ಕೆ.ಎಚ್.ರೇವಣ್ಣ, ಬಾಗಲಕೋಟೆಯ ಶ್ರೀಶೈಲ ಚೆನ್ನಪ್ಪ,

ADVERTISEMENT

ಹಾಸನದ ಜವರಯ್ಯ, ಮಂಡ್ಯದ ಸಾಕಮ್ಮ, ದೊಡ್ಡಕಾಳೇಗೌಡ, ಬಳ್ಳಾರಿಯ ಕಿಂಡ್ರಿ ಲಕ್ಷ್ಮೀಪತಿ, ಚಿತ್ರದುರ್ಗದ ಮಾರಕ್ಕ, ಧಾರವಾಡದ ಶಂಕರಯ್ಯ ಹಿರೇಮಠ, ಕೊಡಗು ಜಿಲ್ಲೆಯ ಸುಜಾತ, ಬೆಸೂರು ಶಾಂತೇಶ್, ಕೊಪ್ಪಳದ ಶಾವಮ್ಮ, ಚಾಮರಾಜನಗರದ ಮಲ್ಲೇಗೌಡ, ಉಡುಪಿಯ ರವೀಂದ್ರ ಪಾಣರ, ಕಾಸರಗೋಡು ಜಿಲ್ಲೆಯ ಎ.ಶ್ರೀನಾಥ ಅವರಿಗೆ ಕಾರ್ಯಕ್ರಮದಲ್ಲಿ ಲೋಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ, ಮ್ಯಾನೇಜಿಂಗ್‌ ಟ್ರಸ್ಟಿ ಆದಿತ್ಯ ನಂಜರಾಜ್‌, ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ ಇದ್ದರು. ಇದೇ ಸಂದರ್ಭ 2021ನೇ ಸಾಲಿನ ಕರ್ನಾಟಕ ಜಾನಪದ ಪರಿಷತ್ತಿನ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.