ADVERTISEMENT

ಜಂಗಲ್ ಟ್ರೈಲ್ ರೆಸಾರ್ಟ್‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:16 IST
Last Updated 22 ಮೇ 2024, 5:16 IST
ಹಾರೋಹಳ್ಳಿ ತಾಲೂಕಿನ ಗೊಟ್ಟಿಗೆ ಹಳ್ಳಿಯ ಜಂಗಲ್ ಟ್ರೈಲ್ ರೆಸಾರ್ಟ ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರವಿ ಕುಮಾರ್ ಹಾಗೂ ತಹಸೀಲ್ದಾರ್ ವಿಜಿಯಣ್ಣ ಬೀಗ ಹಾಕಿರುವುದು
ಹಾರೋಹಳ್ಳಿ ತಾಲೂಕಿನ ಗೊಟ್ಟಿಗೆ ಹಳ್ಳಿಯ ಜಂಗಲ್ ಟ್ರೈಲ್ ರೆಸಾರ್ಟ ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರವಿ ಕುಮಾರ್ ಹಾಗೂ ತಹಸೀಲ್ದಾರ್ ವಿಜಿಯಣ್ಣ ಬೀಗ ಹಾಕಿರುವುದು   

ಹಾರೋಹಳ್ಳಿ: ತಾಲ್ಲೂಕಿನ ಗೊಟ್ಟಿಗೆಹಳ್ಳಿಯಲ್ಲಿ ಜಂಗಲ್ ಟ್ರೈಲ್ ರೆಸಾರ್ಟ್ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆಯದೇ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದಾರೆ ಎಂದು ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶದಂತೆ ಜಂಗಲ್ ಟ್ರೈಲ್ ರೆಸಾರ್ಟ್‌ಗೆ ಮಂಗಳವಾರ ಭೇಟಿ ನೀಡಿದ್ದ ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು, ರೆಸಾರ್ಟ್ ಮಾಲೀಕರಿಗೆ ನೊಟೀಸ್ ನೀಡಿ, ರೆಸಾರ್ಟ್‌ಗೆ ಬೀಗಮುದ್ರೆ ಹಾಕಿ ಬಂದ್ ಮಾಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಆಡುವಾಗ ತಂತಿ ತುಂಡಾಗಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.