ADVERTISEMENT

ಮೇದರದೊಡ್ಡಿ ಗ್ರಾಮಕ್ಕೆ ಬಂತು ಸರ್ಕಾರಿ ಬಸ್‌!

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:30 IST
Last Updated 12 ಜೂನ್ 2024, 6:30 IST

ಕನಕಪುರ: ಸ್ವಾತಂತ್ರ್ಯ ಲಭಿಸಿ 77 ವರ್ಷದ ಬಳಿಕ ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಮೇದರದೊಡ್ಡಿ  ಸರ್ಕಾರಿ ಬಸ್‌ ಸೇವೆ ಕಂಡಿದೆ. 

ಗ್ರಾಮಕ್ಕೆ ಸೋಮವಾರ ಬಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಕಂಡು ಹರ್ಷಿತರಾದ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ಪರಿಶಿಷ್ಟ ಜಾತಿಯ 50 ಕುಟುಂಬ ಇರುವ ಈ ಕುಗ್ರಾಮಕ್ಕೆ ಇಲ್ಲಿಯವರೆಗೆ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಶಾಲೆ, ಕಾಲೇಜುಗಳಿಗೆ ಹೋಗಲು ಗ್ರಾಮದ ಮಕ್ಕಳು ತುಂಬಾ ಕಷ್ಟ ಪಡಬೇಕಿತ್ತು. ರೋಗಿಗಳು ಆಸ್ಪತ್ರೆಗೆ ಹೋಗಲು ಸಾಹಸ ಮಾಡಬೇಕಿತ್ತು. 

ಸುತ್ತಲೂ ಬೆಟ್ಟ, ಗುಡ್ಡಗಳಿರುವ ಈ ಗ್ರಾಮಕ್ಕೆ ಹಗಲು ವೇಳೆಯಲ್ಲೆ ಜನರು ಗ್ರಾಮಕ್ಕೆ ನಡೆದುಕೊಂಡು ಬರಲು ಸಾಹಸ ಪಡಬೇಕು. ಗ್ರಾಮದ ಬಹುತೇಕ ಜನರು ಕೂಲಿಕಾರರಾಗಿದ್ದು ಕೆಲಸ ಅರಿಸಿ ನಿತ್ಯ ನಗರ ಪ್ರದೇಶಗಳಿಗೆ ಹೋಗುತ್ತಾರೆ. ಸಾರಿಗೆ ಸೌಲಭ್ಯ ಇಲ್ಲದೆ ಪರದಾಡುತ್ತಿದ್ದರು. 

ಗ್ರಾಮಕ್ಕೆ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕ ಮುದವಾಡಿಯ ರಾಜೀವ್‌ ಮೇ. 26 ರಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.  

ಗ್ರಾಮಕ್ಕೆ ಭೇಟಿ ನೀಡಿದ್ದ ಸಾರಿಗೆ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಬಸ್‌ ಅವಶ್ಯಕತೆ ಇರುವುದನ್ನು ಮನಗಂಡು ಇಲಾಖೆಗೆ ಶಿಫಾರಸು ಮಾಡಿದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.