ADVERTISEMENT

ಕಾಡಾನೆ ದಾಳಿ: ರೈತನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 16:20 IST
Last Updated 6 ನವೆಂಬರ್ 2024, 16:20 IST

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿ ದೊಡ್ಡ ಬೆಟ್ಟಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ರಾಗಿ ಹೊಲ ಕಾಯಲು ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟಾಚಲಯ್ಯ (67) ಆನೆ ದಾಳಿಗೆ ಸಿಲುಕಿ ಗಾಯಗೊಂಡವರು. ದಾಳಿಯಲ್ಲಿ ಸೊಂಟ ಮತ್ತು ಕಾಲುಮುರಿದಿದೆ.

ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಘಟನೆಯ ವಿವರ: ವೆಂಕಟಾಚಲಯ್ಯ ಕಾಡಂಚಿನ ತಮ್ಮ ಜಮೀನಿನಲ್ಲಿ ರಾಗಿ ಕಾಯಲು ಮಂಗಳವಾರ ರಾತ್ರಿ ಮತ್ತಿಬ್ಬರು ರೈತಾರಾದ ಸಂಜೀವಯ್ಯ ಮತ್ತು ಹನುಮಂತು ಅವರ ಜೊತೆ ಮಂಗಳವಾರ ಹೋಗಿದ್ದರು.

ಬುಧವಾರ ಬೆಳಗಿನ ಜಾವ ಜಮೀನಿನಿಂದ ಮನೆಗೆ ಬರುತ್ತಿದ್ದಾಗ ಮರದ ಮರೆಯಲ್ಲಿದ್ದ ಕಾಡಾನೆಯು ಏಕಾಏಕಿ ವೆಂಕಟಾಚಲಯ್ಯ ಅವರ ಮೇಲೆ ದಾಳಿ ನಡೆಸಿ, ಸೊಂಡಿಲಿನಿಂದ ಎತ್ತಿ ಬಿಸಾಡಿದೆ.

ಈ ವೇಳೆ ಅವರು ಜೋರಾಗಿ ಕಿರುಚಿಕೊಂಡರು. ಆಗ ಅಕ್ಕ ಪಕ್ಕದ ಜಮೀನಿನಲ್ಲಿ ಕಾವಲು ಕಾಯಲು ಜೊತೆಯಲ್ಲಿ ಹೋಗಿದ್ದ ಹನುಮಂತ ಮತ್ತು ಸಂಜೀವಯ್ಯ ಓಡಿ ಬಂದು ಪಟಾಕಿ ಸಿಡಿಸಿದ್ದಾರೆ. ಇದರಿಂದ ಹೆದರಿದ ಕಾಡಾನೆಯು ವೆಂಕಟಾಚಲಯ್ಯ ಅವರನ್ನು ಬಿಟ್ಟು ಓಡಿ ಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.