ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 8:19 IST
Last Updated 4 ನವೆಂಬರ್ 2024, 8:19 IST
ಕನಕಪುರ ಹೊಂಗಿರಣ ಆವರಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಂ.ವಿ.ವೆಂಕಟೇಶ್ ಅವರಿಗೆ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕನಕಪುರ ಹೊಂಗಿರಣ ಆವರಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಂ.ವಿ.ವೆಂಕಟೇಶ್ ಅವರಿಗೆ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಕನಕಪುರ: ನಗರದಲ್ಲಿ ಹೊಂಗಿರಣ ಆವರಣದಲ್ಲಿ ಜಿಲ್ಲಾ ಲೇಖಕರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.

ಚೀಲೂರು ಮುನಿರಾಜು, ಚಿಕ್ಕೆಂಪೇಗೌಡ, ಪಿ ಕಮಲಮ್ಮ, ಹಾ.ವಿ.ಮಂಜುಳ, ಎಂ.ವಿ.ವೆಂಕಟೇಶ್, ಕೆ.ಟಿ.ರಂಗಸ್ವಾಮಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾಸಾಪ ತಾಲ್ಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಕನ್ನಡ ನಾಡು ಉದಯವಾಗಿದ್ದು, ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿದರು.

ADVERTISEMENT

ಸಮಾಜ ಸೇವಕಿ ಪಿ.ಕಮಲಮ್ಮ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ರಾಜ್ಯ ಮಹಿಳಾ ಲೇಖಕಿಯರ ಖಜಾಂಚಿ ಹಾ.ವಿ.ಮಂಜುಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು.

ಎಲ್ಲೇಗೌಡ ಬೆಸಗರಹಳ್ಳಿ, ಚಿಕ್ಕಮರಿಗೌಡ, ಚೆಲುವಮ್ಮ, ಯಶೋಧ ರಂಗಸ್ವಾಮಿ, ಕೆಎಸ್ ಭಾಸ್ಕರ್, ಅಂಗಡಿ ರಮೇಶ್, ಟಿ.ಎಂ.ರಾಮಯ್ಯ, ಬಿಎಸ್ಎನ್ಎಲ್ ನಾಗರಾಜು, ಸಿ.ಪುಟ್ಟಸ್ವಾಮಿ, ಶೈಲಾ ಶ್ರೀನಿವಾಸ್, ಬರಗೂರು ಪುಟ್ಟರಾಜು, ನಾರಾಯಣ್ ರಾವ್ ಪಿಸ್ಸೆ ಉಪಸ್ಥಿತರಿದ್ದರು.

ಸಾಹಿತಿಗಳಾದ ಪೂರ್ಣಚಂದ್ರ, ಕೆಂಗಲ್ ವಿನಯ್ ಕುಮಾರ್, ಅಮೃತ ಮತ್ತು ಸಂಗಡಿಗರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.