ADVERTISEMENT

ಕನಕಪುರ: ಪರಿಸರ ಸಮತೋಲನ ಕಾಪಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 4:31 IST
Last Updated 10 ಜುಲೈ 2023, 4:31 IST
ಕನಕಪುರ ಆರ್‌ಇಎಸ್‌ ಆವರಣದಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಮಾಡುತ್ತಿರುವುದು
ಕನಕಪುರ ಆರ್‌ಇಎಸ್‌ ಆವರಣದಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಮಾಡುತ್ತಿರುವುದು   

ಕನಕಪುರ: ಮನುಷ್ಯರಿಗೆ ಅನುಗುಣವಾಗಿ ಮರ ಬೆಳೆಸಬೇಕಿದೆ. ಕಾರ್ಖಾನೆಗಳು ಹೆಚ್ಚುತ್ತಿವೆ, ಇದಕ್ಕೆ ಸಮಾನವಾಗಿ ನಾವು ಸಸಿಗಳನ್ನು ನೆಟ್ಟು ಬೆಳಸಬೇಕಿದೆ ಎಂದು ಟೊಯೊಟ ಕಂಪನಿ ಉಪ ವ್ಯವಸ್ಥಾಪಕ ಕಾರ್ತಿಕ್‌ ಕೆ.ಎಸ್‌ ತಿಳಿಸಿದರು.

ಇಲ್ಲಿನ ರೂರಲ್‌ ಎಜುಕೇಷನ್‌ ಸೊಸೈಟಿ ಆವರಣದ ಗ್ರಾಮಾಂತರ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಗಿಡನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಟೊಯೆಟ ಸಂಸ್ಥೆಯು ಪ್ರತಿ ವರ್ಷ 2 ಸಾವಿರ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದೆ. ಅದರಂತೆ ಆರ್‌ಇಎಸ್‌ನಲ್ಲಿ 200 ಗಿಡಗಳನ್ನು ನಡೆಲಾಗುತ್ತಿದೆ. ಗಿಡಗಳನ್ನು ನೆಟ್ಟರೆ ಸಾಲದು. ಅವುಗಳನ್ನು ಪೋಷಣೆ ಮಾಡಬೇಕಿದೆ, ಆಗ ಮಾತ್ರ ಗಿಡ ನೆಟ್ಟ ಕೆಲಸ ಸಾರ್ಥಕವಾಗುತ್ತದೆ ಎಂದರು.

ADVERTISEMENT

ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್‌ ಮಾತನಾಡಿ, ನಿಸರ್ಗದ ಸಮತೋಲನಕ್ಕೆ ಮರ ಬೆಳೆಸುವುದು ಒಂದೇ ಪರಿಹಾರ. ಅರಣ್ಯವಲ್ಲದೆ ಹೊಲ, ಜಮೀನು, ಸರ್ಕಾರಿ ಜಾಗಗಳಲ್ಲಿ ನಾವು ಮರಗಿಡ ಬೆಳಸಿ ವನ ಸಂಪತ್ತು ಹೆಚ್ಚಿಸಬೇಕಿದೆ. ರಸ್ತೆ ಬದಿಗಳಲ್ಲಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ಬೆಳಸುವ ಕೆಲಸ ಮಾಡುತ್ತಿದ್ದು, ಕುರಿ–ಮೇಕೆಗಳಿಂದ ಗಿಡ ರಕ್ಷಣೆ ಎಂದರು.

ಮರ ಬೆಳಸುವ ಕೆಲಸಕ್ಕೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಾಡಬೇಕು ಎಂದು ತಿಳಿಸಿದರು.

ಆರ್‌ಇಎಸ್‌ ಸಂಸ್ಥೆ ನಿರ್ದೇಶಕ ಕೆ.ಬಿ.ನಾಗರಾಜು, ಎನ್‌ಸಿಸಿ ಅಧಿಕಾರಿ ವಿಜೆಯೇಂದ್ರ ಮಾತನಾಡಿ, ರೋಟರಿ ಮತ್ತು ಟಯೊಟ ಸಂಸ್ಥೆ ಜತೆಗೂಡಿ ಸಂಸ್ಥೆ ಖಾಲಿ ಜಾಗದಲ್ಲಿ 200 ಗಿಡಗಳನ್ನು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದ ನೆಡಸುತ್ತಿದ್ದು ಅವರ ಪೋಷಣೆಯನ್ನು ವಿದ್ಯಾರ್ಥಿಗಳೇ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಟೊಯೊಟ ಕಂಪನಿ, ಕನಕಪುರ ರೋಟರಿ, ಕನಕಪುರ ಅರಣ್ಯ ಇಲಾಖೆ, ರೂರಲ್ ಎಜುಕೇಶನ್ ಸೊಸೈಟಿ, ರೂರಲ್ ಪದವಿ ಕಾಲೇಜಿನ ಎನ್‌ಸಿ ಸಿ ತಂಡದ ಆಶ್ರಯದಲ್ಲಿ 200 ಗಿಡ ನಡೆಯಲಾಯಿತು.

ಟಯೊಟ ಕಂಪನಿ ಮೊಹಿಸಿದ್ದೀನ್, ರಾಜೇಶ್, ವೀರಭದ್ರ, ಚಂದ್ರೇಶ್, ರೋಟರಿ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ಗವಿರಾಜ್, ಕಾರ್ಯದರ್ಶಿ ಸಿದ್ದರಾಜು, ಪದಾಧಿಕಾರಿಗಳು, ಸರ್ಕಾರಿ ಸಹ ಶಿಕ್ಷಕರ ಸಂಘದ ನಿರ್ದೇಶಕ ಟಿ.ವಿ.ಎನ್ ಪ್ರಸಾದ್. ಅರಣ್ಯ ಇಲಾಖೆ ದಾಸೇಗೌಡ, ರೂರಲ್‌ ಪದವಿ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಪ್ರೊ.ದೇವರಾಜು, ಕುಮಾರಸ್ವಾಮಿ, ಎನ್‌ಸಿಸಿ ವಿದ್ಯಾರ್ಥಿಗಳು ಇದ್ದರು.

ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಪ್ರತಿಜ್ಞೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.