ADVERTISEMENT

ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್‌ ವಶ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 14:26 IST
Last Updated 14 ನವೆಂಬರ್ 2024, 14:26 IST
ಕನಕಪುರ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೈಕ್ರೋ ಪ್ಲಾಸ್ಟಿಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ
ಕನಕಪುರ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೈಕ್ರೋ ಪ್ಲಾಸ್ಟಿಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ   

ಕನಕಪುರ: ನಿಷೇಧಿತ ಮೈಕ್ರೋ ಪ್ಲಾಸ್ಟಿಕ್‌ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಿಢೀರ್‌ ದಾಳಿ ನಡೆಸಿದ ನಗರಸಭೆ ಆಯುಕ್ತರ ನೇತೃತ್ವ ತಂಡವು ಒಂದು ಟನ್‌ನಷ್ಟು ಪ್ಲಾಸ್ಟಿಕ್‌ ವಶಪಡಿಸಿಕೊಂಡು, ದಂಡ ವಿಧಿಸಿದೆ.

ನಗರಸಭೆ ಆಯುಕ್ತ ಎಂ.ಎಸ್‌. ಮಹದೇವ್ ನೇತೃತ್ವದ ತಂಡವು ಅಕ್ರಮವಾಗಿ ನಿಷೇಧಿತ ಪ್ಲಾಸ್ಟಿಕ್‌ ಸಂಗ್ರಹಿಸಿದ್ದ ಮತ್ತು ಮಾರಾಟ ಮಾಡುತ್ತಿದ್ದ  ಮಳಿಗೆ ಮಾಲೀಕರಿಗೆ ₹15,000 ದಂಡ ವಿಧಿಸಿದರು. ಇದು ಮುಂದುವರೆದರೆ ಪ್ರಕರಣ ದಾಖಲಿಸಲಾಗುವುದು ಎಚ್ಚರಿಕೆ ನೀಡಿದರು.

ರಸ್ತೆ ಬದಿಯಲ್ಲಿ ಪಾಸ್ಟ್‌ಫುಡ್‌ಗಳ ಮೇಲೂ ದಾಳಿ ನಡೆಸಿ ಇಡ್ಲಿ ಬೇಯಿಸಲು ಮತ್ತು ತಿಂಡಿ ಪ್ಲೇಟ್‌ಗಳ ಮೇಲೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿತು.

ADVERTISEMENT

‘ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಸಾರ್ವಜನಿಕರು ಸಹಕರಿಸಬೇಕು. ಅಂಗಡಿಗಳಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ದೊಡ್ಡ ಮೊತ್ತದ ದಂಡ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು’ ಎಂದು ಆಯುಕ್ತ ಎಂ.ಎಸ್‌. ಮಹದೇವ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.