ಕನಕಪುರ: ಕಳೆದ ಮೂರು ದಿನಗಳಿಂದ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಅರ್ಕಾವತಿ ನದಿಯಲ್ಲಿ ಶನಿವಾರ ಬೆಳಿಗ್ಗೆ ಪ್ರವಾಹ ಉಕ್ಕಿ ಹರಿಯುತ್ತಿದ್ದು ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿರು ಸೇತುವೆಗಳು ನೀರಿನಲ್ಲಿ ಮುಳುಗಿವೆ.
ತಾಲ್ಲೂಕಿನ ಅಳ್ಳಿಮಾರನಹಳ್ಳಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಕೋನಮಾನಹಳ್ಳಿ ಮತ್ತು ಕುಂತಿಕಲ್ ದೊಡ್ಡಿ ಗ್ರಾಮಗಳ ಸೇತುವೆಗಳ ಮೇಲೆ ಅಪಾರ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿವೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರು ಕಾರಣ ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿವೆ. ಇನ್ನೂ 10–15 ಕಿ.ಮೀ ಬಳಸಿಕೊಂಡು ರಾಮನಗರ ಮತ್ತು ಕನಕಪುರಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕೋನಮಾನಹಳ್ಳಿ ಮತ್ತು ಕುಂತಿಕಲ್ ದೊಡ್ಡಿ ಗ್ರಾಮಗಳ ನಡುವಿನ ಕಿರು ಸೇತುವೆ ಕೂಡ ಜಲಾವೃತ್ತಗೊಂಡಿದೆ. ಮಾವತ್ತೂರು ಕೆರೆ ಕೋಡಿ ಹರಿಯುತ್ತಿದ್ದು ಆಡನಕುಪ್ಪೆ ಮತ್ತು ಬೂದುಗುಪ್ಪೆ ಗ್ರಾಮಗಳ ಕಿರು ಸೇತುವೆ ಸಂಪೂರ್ಣ ಮುಳುಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.