ಕನಕಪುರ: ನಗರದ ಬೂದಿಕೇರಿ ರಸ್ತೆಯಲ್ಲಿ ಒಳಚರಂಡಿಯಲ್ಲಿ ಕಸ ಕಟ್ಟಿಕೊಂಡು ಮ್ಯಾನ್‌ಹೋಲ್‌ನಿಂದ ಗಲೀಜು ನೀರು ಬರುತ್ತಿದ್ದು, ಅದನ್ನು ನಗರಸಭೆ ಸಿಬ್ಬಂದಿ ಬುಧವಾರ ಬೆಳಗ್ಗೆ ಸ್ವಚ್ಛಗೊಳಿಸಿದರು.
ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು 15 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೆ ಆಗಾಗ ಒಳಚರಂಡಿಯ ಪೈಪ್‌ಗಳು ಬ್ಲಾಕ್ ಆಗಿ ಮ್ಯಾನ್‌ಹೋಲ್ ಗಳಿಂದ ಗಲೀಜು ನೀರು ಉಕ್ಕಿ ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡದಿರುವುದು ಮತ್ತು ಅದಕ್ಕೆ ಅಳವಡಿಸಿರುವಂತಹ ಪೈಪ್‌ಗಳನ್ನು ಸಣ್ಣದಾಗಿರುವುದರಿಂದ ಇಂತಹ ಸಮಸ್ಯೆ ಮತ್ತೆ ಮತ್ತೆ ಉದ್ಭವಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕೆಲವು ಸ್ಥಳಗಳಲ್ಲಿ ಸರಿಯಾದ ಇಳಿಜಾರಿನಂತೆ ಪೈಪು ಅಳವಡಿಸದೆ ಎತ್ತರ ಮಾಡಿರುವುದು ಇದಕ್ಕೆ ಕಾರಣ. ಒಳಚರಂಡಿಯಲ್ಲಿ ಸ್ಯಾನಿಟರಿ ಪ್ಯಾಡ್ ಇಲ್ಲವೆ ಬಾಟಲ್ ಹಾಕುತ್ತಿರುವುದರಿಂದ ಪೈಪ್‌ಗಳಲ್ಲಿ ಬ್ಲಾಕ್ ಆಗುತ್ತಿವೆ ಎಂದು ತಿಳಿಸಿದ್ದಾರೆ.
ಒಳಚರಂಡಿ ನಿರ್ಮಾಣದ ಎಂಜಿನಿಯರ್‌ಗಳು ಇದರ ಬಗ್ಗೆ ಗಮನ ಹರಿಸಿ, ಯಾವ ಸ್ಥಳಗಳಲ್ಲಿ ಒಳಚರಂಡಿ ಪೈಪ್ ಬ್ಲಾಕ್ ಆಗಿ ಮ್ಯಾನ್ ಹೋಲ್‌ಗಳಲ್ಲಿ ಗಲೀಜು ನೀರು ಉಕ್ಕಿ ಹರಿಯುತ್ತದೆ ಎಂಬುದನ್ನು ಪತ್ತೆ ಹಚ್ಚಿ ಶಾಶ್ವತವಾಗಿ ಪರಿಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.