ADVERTISEMENT

ಕುದೂರು: ಸಂಜೀವಿನಿ ಮಾಸಿಕ ಸಂತೆ, ಮನ ಸೆಳೆದ ರೇಷ್ಮೆ ಸೀರೆಗಳು

ಮನ ಸೆಳೆದ ರೇಷ್ಮೆ ಸೀರೆಗಳು

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 3:12 IST
Last Updated 29 ಜೂನ್ 2022, 3:12 IST
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ನಡೆದ ಸಂಜೀವಿನಿ ಮಾಸಿಕ ಸಂತೆಯಲ್ಲಿ ಮಹಿಳೆಯರೇ ಸಿದ್ಧಪಡಿಸಿರುವ ರೇಷ್ಮೆ ಸೀರೆಗಳನ್ನು ತಾ.ಪಂ. ಇಒ ಚಂದ್ರ ವೀಕ್ಷಿಸಿದರು. ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಪಿಡಿಒ ಲೋಕೇಶ್‌ ಹಾಜರಿದ್ದರು
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ನಡೆದ ಸಂಜೀವಿನಿ ಮಾಸಿಕ ಸಂತೆಯಲ್ಲಿ ಮಹಿಳೆಯರೇ ಸಿದ್ಧಪಡಿಸಿರುವ ರೇಷ್ಮೆ ಸೀರೆಗಳನ್ನು ತಾ.ಪಂ. ಇಒ ಚಂದ್ರ ವೀಕ್ಷಿಸಿದರು. ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಪಿಡಿಒ ಲೋಕೇಶ್‌ ಹಾಜರಿದ್ದರು   

ಕುದೂರು (ಮಾಗಡಿ): ಇಲ್ಲಿನ ಗ್ರಾಮ ಪಂಚಾಯಿತಿಯ ತರಕಾರಿ ಸಂತೆ ಮೈದಾನದಲ್ಲಿ ಮಂಗಳವಾರ ಸಂಜೀವಿನಿ ಮಾಸಿಕ ಸಂತೆ ಅಂಗವಾಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರ ಸಂತೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿ ಒಂದು ಕಾಲದಲ್ಲಿ ಕೈಮಗ್ಗಗಳಲ್ಲಿ ಅತ್ಯುತ್ತಮವಾದ ರೇಷ್ಮೆ ಸೀರೆಗಳನ್ನು ನೇಯ್ದು ಮಾರಾಟ ಮಾಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಕೈಮಗ್ಗಗಳು ಮೂಲೆಗುಂಪಾಗಿ ವಿದ್ಯುತ್‌ ಚಾಲಿತ ಮಗ್ಗಗಳು ಬಳಕೆಗೆ ಬಂದಿವೆ ಎಂದು ತಿಳಿಸಿದರು.

ADVERTISEMENT

ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳನ್ನು ತಯಾರಿಸುತ್ತಿರುವ ಮಹಿಳೆಯರಿಗೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಕೊಡಮಾಡಿರುವ ಸವಲತ್ತು ಒದಗಿಸಲಾಗುವುದು ಎಂದರು.

ಮಹಿಳೆಯರು ಗೃಹ ಕೃತ್ಯ ನಿರ್ವಹಿಸುವುದರ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಡಿಒ ಲೋಕೇಶ್‌ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ತಿಂಗಳಿಗೊಂದು ಸಂಜೀವಿನಿ ಮಾಸಿಕ ಸಂತೆ ನಡೆಸಲಾಗುವುದು. ತಾಲ್ಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ, ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ವಿಶೇಷ ಸವಲತ್ತು ದೊರಕಿಸಿ ಕೊಡಲಾಗುವುದು. ಮಹಿಳೆಯರ ಸಬಲೀಕರಣಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಅನಂತನಾರಾಯಣ, ಗಿರೀಶ್‌ ಹಾಗೂ ಸಂಜೀವಿನಿ ಒಕ್ಕೂಟದ ಮಹಿಳೆಯರು ಇದ್ದರು. ಮಹಿಳೆಯರೇ ತಯಾರಿಸಿರುವ ರೇಷ್ಮೆ ಸೀರೆಗಳು ಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.