ADVERTISEMENT

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರಿನ ಯುವ ವಿಜ್ಞಾನಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 14:49 IST
Last Updated 27 ಅಕ್ಟೋಬರ್ 2023, 14:49 IST
ಡಾ. ಗುರುರಾಜ್ ಕೆ.ಜೆ
ಡಾ. ಗುರುರಾಜ್ ಕೆ.ಜೆ   

ಕುದೂರು: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಶೇ. 2ರಷ್ಟು ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರು ಪಟ್ಟಣದ ಯುವ ವಿಜ್ಞಾನಿ ಡಾ. ಗುರುರಾಜ್ ಕೆ.ಜೆ. ಭಾಜನರಾಗಿದ್ದಾರೆ.

ಪ್ರತಿಷ್ಠಿತ ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜಾನ್ ಅಯೋನ್ನಿಡಿಸ್ ಅ. 4ರಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದು, ಇದರ ವಿವರ ಅಂತರ್ಜಾಲದಲ್ಲಿ ಲಭ್ಯವಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹ ಲೇಖನಗಳು, ಎಚ್- ಇಂಡೆಕ್ಸ್ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಜಗತ್ತಿನ ಅತ್ಯುತ್ತಮ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶ ಪ್ರಕಟಿಸಲಾಗುತ್ತದೆ. ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡುವ ಸಂಪ್ರದಾಯ ಶುರುವಾಗಿದ್ದು 2018ರಲ್ಲಿ.

ADVERTISEMENT

ಸಾಧಕರ ಪಟ್ಟಿಯಲ್ಲಿ ಗುರುರಾಜ್ 177729 ನೇ ಸ್ಥಾನ ಪಡೆದಿರುವ ಇವರು ಪ್ರಸ್ತುತ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪರಿಚಯ: ಗುರುರಾಜ್ ಕುದೂರಿನ ಜಯಪ್ರಕಾಶ್ ಹಾಗೂ ಉಷಾ ದಂಪತಿಯಪುತ್ರ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರುವ ಗುರುರಾಜ್, ಅಮೆರಿಕದ ಮೆಕ್ಸಿಕೋ ನಗರದ ಗ್ವಾಡಲಜಾರಾ ವಿಶ್ವವಿದ್ಯಾಲಯದಲ್ಲಿ ಮೆಟೀರಿಯಲ್ ಸೈನ್ಸ್ ನಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಈವರೆಗೆ ಇವರ ಸುಮಾರು 63 ಸಂಶೋಧನಾ ಪ್ರಬಂಧಗಳನ್ನು ಜಗತ್ತಿನ ವಿವಿಧ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.