ADVERTISEMENT

ಕೆಪಿಎಸ್ ಶಾಲೆಗೆ ಶುದ್ಧ ನೀರು ಘಟಕ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:08 IST
Last Updated 26 ಜೂನ್ 2024, 5:08 IST
ಕುದೂರು ಪಟ್ಟಣದ ಕೆಪಿಎಸ್ ಶಾಲೆಗೆ ಬೆಂಗಳೂರಿನ ಜಯನಗರ ರೋಟರಿ ಹಾಗೂ ರೋಟರಿ ಕುದೂರು ಸೆಂಟ್ರಲ್ ವತಿಯಿಂದ 500 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಘಟಕಕ್ಕೆ ಗಣ್ಯರು ಚಾಲನೆ ನೀಡಿದರು.
ಕುದೂರು ಪಟ್ಟಣದ ಕೆಪಿಎಸ್ ಶಾಲೆಗೆ ಬೆಂಗಳೂರಿನ ಜಯನಗರ ರೋಟರಿ ಹಾಗೂ ರೋಟರಿ ಕುದೂರು ಸೆಂಟ್ರಲ್ ವತಿಯಿಂದ 500 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಘಟಕಕ್ಕೆ ಗಣ್ಯರು ಚಾಲನೆ ನೀಡಿದರು.   

ಕುದೂರು: ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿದ್ದರೆ, ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಜಯನಗರ ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ 500 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ವಿತರಿಸಿ ಅವರು ಮಾತನಾಡಿದರು.

ರೋಟರಿ ಕುದೂರು ಸೆಂಟ್ರಲ್ ಅಧ್ಯಕ್ಷ ಜಿ. ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶುದ್ಧ ನೀರು ಘಟಕಗಳು ಇಲ್ಲದ ಕಾರಣ ಬೋರ್‌ವೆಲ್ ನೀರನ್ನೇ ನೇರವಾಗಿ ಮಕ್ಕಳು ಬಳಸುತ್ತಿದ್ದರು. ಇದೀಗ ರೋಟರಿ ಸಂಸ್ಥೆಯಿಂದ ಗುಣಮಟ್ಟದ ಶುದ್ಧ ನೀರಿನ ಯಂತ್ರಗಳನ್ನು ಅಳವಡಿಸಲಾಗಿದ್ದು, ಮಕ್ಕಳಿಗೆ ಶುದ್ಧ ಕುಡಿಯುವ ವ್ಯವಸ್ಥೆ ಮಾಡಲಾಗಿದೆ ಎಂದರು.

ADVERTISEMENT

ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಪ್ರಭಾಕರ್, ಜಯನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ರವಿ, ರೊಟೇರಿಯನ್ ಗಳಾದ ಶಂಕರಮೂರ್ತಿ, ರಾಮ್ ಪ್ರಸಾದ್, ಹರೀಶ್ ಪಟೇಲ್, ಎಲ್ಐಸಿ ರಮೇಶ್, ಓಂ ಪ್ರಕಾಶ್, ಜಗದೀಶ್ ರಾಥೋಡ್, ನಾಗಪ್ರಸಾದ್, ನಾಗಭೂಷಣ್, ರುದ್ರೇಶ್, ಕೆ.ಟಿ ವೆಂಕಟೇಶ್, ಮೋಹನ್ ಮಾಗಡಿ, ರಮೇಶ್ ಎಂ.ಜಿ, ಮಲ್ಲೂರು ಲೋಕೇಶ್, ಸಂತೋಷ್, ಮನು, ಶಾಲಾ ಶಿಕ್ಷಕರು ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.