ADVERTISEMENT

ಕುದೂರು: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 14:20 IST
Last Updated 14 ಜೂನ್ 2024, 14:20 IST
ಕುದೂರು ತುಮಕೂರು ರಸ್ತೆ ಹೊನ್ನುಡಿಕೆ ಕೆರೆ ಏರಿ ಮೇಲೆ ನಗರ ಸಾರಿಗೆ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದಿರುವುದು
ಕುದೂರು ತುಮಕೂರು ರಸ್ತೆ ಹೊನ್ನುಡಿಕೆ ಕೆರೆ ಏರಿ ಮೇಲೆ ನಗರ ಸಾರಿಗೆ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದಿರುವುದು   

ಕುದೂರು: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಸುಗ್ಗನಹಳ್ಳಿ ಸಮೀಪ ಹೊನ್ನುಡಿಕೆ ಕೆರೆ ಏರಿ ಮೇಲೆ ಈಚೆಗೆ ನಡೆದಿದೆ.

ಕುದೂರುನಿಂದ ತುಮಕೂರಿಗೆ ಹೋಗುವ ಮಾರ್ಗ ಮಧ್ಯೆ ಹೊನ್ನುಡಿಕೆ ಕೆರೆ ಏರಿ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಟೇರಿಂಗ್ ಕಟ್ ಆಗಿದೆ. ಇದನ್ನು ಅರಿತ ಬಸ್ ಚಾಲಕ ಕೆರೆ ಏರಿಯಿಂದ 20 ಅಡಿ ಆಳಕ್ಕೆ ಬೀಳಬೇಕಿದ್ದ ಬಸ್‌ ಅನ್ನು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಬಸ್‌ನಲ್ಲಿದ್ದ 70 ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಅವಘಡಕ್ಕೆ ಬಸ್ ಹದಗೆಟ್ಟಿರುವುದೇ ಮೂಲ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬಸ್ ತಡೆಗೋಡೆಗೆ ಗುದ್ದಿರುವುದು ನಿಜ. ಸಾರ್ವಜನಿಕರ ಆರೋಪದಂತೆ ಸ್ಟೇರಿಂಗ್ ಕಟ್‌ನಿಂದಾಗಿ ಘಟನೆ ಸಂಭವಿಸಿಲ್ಲ ಎಂದು ಕೆಎಸ್ಆರ್‌ಟಿಸಿ ತುಮಕೂರು ವಿಭಾಗದ ಚಂದ್ರಶೇಖರ್ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.