ADVERTISEMENT

ಮಾಗಡಿ: ಜಮೀನಲ್ಲಿ ಅಳವಡಿಸಿದ್ದ ವಿದ್ಯುತ್‌ ತಂತಿಗೆ ಸಿಲುಕಿ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:41 IST
Last Updated 2 ಸೆಪ್ಟೆಂಬರ್ 2024, 15:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಾಗಡಿ: ಬೆಳೆ ರಕ್ಷಣೆಗೆಂದು ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಮೃತಪಟ್ಟಿದ್ದು, ಘಟನೆಯಿಂದ ಭಯಗೊಂಡ ರೈತ ಜಮೀನಿನಲ್ಲೆ ಚಿರತೆಯನ್ನು ಹೂತುಹಾಕಿ ಪೊಲೀಸರಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಮರಲಗೊಂಡಲ ಗ್ರಾಮದ ನಿವಾಸಿ ರೈತ ಉಮೇಶ್ ಜಮೀನಿನಲ್ಲಿ ಗೆಣಸು ಬೆಳೆದಿದ್ದು ಕಾಡು ಹಂದಿಗಳು ಬೆಳೆ ನಾಶ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಳೆ ಸುತ್ತ ವಿದ್ಯುತ್ ತಂತಿ ಅಳವಡಿಸಿದ್ದ. ಈ ತಂತಿ ಸ್ಪರ್ಶಿಸಿ ಶನಿವಾರ ರಾತ್ರಿ 4 ವರ್ಷದ ಚಿರತೆ ಮೃತಪಟ್ಟಿದೆ. ಭಯಗೊಂಡ ರೈತ, ಮೃತ ಚಿರತೆಯನ್ನು ಜಮೀನಿನಲ್ಲಿ ಗುಂಡಿ ತೆಗೆದು ಮುಚ್ಚಿದ್ದಾನೆ, ಭಾನುವಾರ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದು, ಪೊಲೀಸರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ADVERTISEMENT

ಮಾಗಡಿ ವಲಯ ಅರಣ್ಯಾಧಿಕಾರಿ ಚೈತ್ರಾ, ಡಿಆರ್‌ಎಫ್ ಶೋಭಾ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಕಳೇಬರ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ರೈತ ಉಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.