ರಾಮನಗರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಚ್.ಎಸ್. ಯೋಗಾನಂದ್ ಹಾಗೂ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನದ ಚುನಾವಣೆ ಅಂಗವಾಗಿ, ನಗರದ ಶಾಂತಿನಿಕೇತನ ಶಾಲೆ, ಚನ್ನಪಟ್ಟಣ ಹಾಗೂ ಮಾಗಡಿಯಲ್ಲಿ ತೆರೆದಿದ್ದ ಮತಕೇಂದ್ರಗಳಲ್ಲಿ ಮತದಾನ ಜರುಗಿತು.
ಚುನಾವಣೆಯಲ್ಲಿ 1,078 ಮತಗಳನ್ನು ಪಡೆದ ಯೋಗಾನಂದ್, ತಮ್ಮ ಎದುರಾಳಿ ಬಿ.ಜೆ. ಲೋಹಿತ್ ಕುಮಾರ್ ಅವರನ್ನು 87 ಮತಗಳ ಅಂತರದಿಂದ ಸೋಲಿಸಿದರು. 991 ಮತಗಳನ್ನು ಪಡೆದ ಲೋಹಿತ್ ನಿರಾಶರಾದರು. ಮೂರು ಕಡೆ ಒಟ್ಟು 2,008 ಮತಗಳು ಚಲಾವಣೆಗೊಂಡವು.
ಮಹಾಸಭಾದ 20 ಪುರುಷ ನಿರ್ದೇಶಕ ಸ್ಥಾನಗಳಿಗೆ ಶಿವಲಿಂಗಯ್ಯ (ಪ್ರೆಸ್ ಶಿವು) ಎಂ. ಮಹೇಶ, ಮಹದೇವಯ್ಯ (ಪೈಂಟ್), ಸಾಂಬಶಿವಯ್ಯ, ಮಹದೇವಯ್ಯ ಬೆಂಕಿ, ಎಂ.ಜೆ. ರೋಹಿತ, ಜಿ.ವಿ. ವೀರಭದ್ರಯ್ಯ (ಶಂಕರಣ್ಣ), ವಿಜಯಕುಮಾರ್ (ದಕ್ಷ), ಸಿ.ಕೆ. ಕೈಲಾಸ್ ಶಂಕರ್, ಸಿ.ಜೆ. ಜಗದೀಶ, ಎಸ್. ಜಗದೀಶ, ಸಿದ್ದಲಿಂಗಮೂರ್ತಿ, ಎಂ.ಸಿ. ಶಿವಸ್ವಾಮಿ, ಬಿ.ಆರ್. ಸಿದ್ದಲಿಂಗಪ್ಪ, ಸೋಮಶೇಖರಮೂರ್ತಿ, ಎಂ.ಬಿ. ಜಗದೀಶ, ಬಿ. ನಾಗೇಶ, ಬಿ. ಮಹೇಶ, ಡಿ.ಬಿ. ಶಿವಕುಮಾರಸ್ವಾಮಿ ಹಾಗೂ ಬೇವೂರು ಶಿವಸ್ವಾಮಿ ಆಯ್ಕೆಯಾದರು.
10 ಸ್ಥಾನಗಳ ಮಹಿಳಾ ನಿರ್ದೇಶಕರ ಸ್ಥಾನಗಳಿಗೆ ಎನ್. ಪುಷ್ಪಲತಾ, ಮಂಗಳಮ್ಮ, ರೇಣುಕಮ್ಮ, ಸರಸ್ವತಮ್ಮ, ಸಂಗೀತಾ, ಸುಧಾರಾಣಿ, ಅಕ್ಕಮಹಾದೇವಮ್ಮ, ಆಶಾ, ಜೆ. ದಿವ್ಯ ಹಾಗೂ ಬಿ.ಎಂ. ಶೋಭಾ ಆಯ್ಕೆಯಾದರು. ರಾಮನಗರ ತಾಲ್ಲೂಕು ಘಟಕಕ್ಕೆ 13 ಪುರುಷ ಹಾಗೂ 7 ಮಹಿಳಾ ನಿರ್ದೇಶಕರು ಆಯ್ಕೆಯಾದರು.
ನೂತನ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಬೆಂಬಲಿಗರು ಹೂವಿನಹಾರ ಹಾಕಿ ಅಭಿನಂದಿಸಿದರು. ಮುಖಂಡರಾದ ರುದ್ರದೇವರು, ಕೆ.ಎಸ್. ಶಂಕರಯ್ಯ, ಎಂ.ಆರ್. ಶಿವಕುಮಾರಸ್ವಾಮಿ, ಬಿಡದಿ ಶಿವಸ್ವಾಮಿ, ಸಿ. ನಾಗರಾಜ್, ಮಹದೇವಯ್ಯ, ಆರ್. ರೇವಣ್ಣ, ಜಗದೀಶ್, ಸಾಂಬಶಿವಯ್ಯ, ಸ್ವಾಮಿ, ಶಿವಶಂಕರ್, ಜಗದೀಶ್, ನಾಗೇಶ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.