ADVERTISEMENT

ಸಾಯಿಖಾನೆಗೆ ಸಾಗಿಸುತ್ತಿದ್ದ 18 ಜಾನುವಾರು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 6:44 IST
Last Updated 22 ಏಪ್ರಿಲ್ 2021, 6:44 IST

ಚನ್ನಪಟ್ಟಣ: ಸರಕು ಸಾಗಣೆ ಟೆಂಪೊದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 18 ಜಾನುವಾರುಗಳನ್ನು ಪಟ್ಟಣದ ಪುರ ಠಾಣೆ ಪೊಲೀಸರು ಮಂಗಳವಾರ ರಕ್ಷಣೆ ಮಾಡಿದ್ದಾರೆ.

ಠಾಣೆಯ ಎದುರಿನಲ್ಲಿ ವಾಹನಗಳ ತಪಾಸಣೆಯಲ್ಲಿದ್ದ ಪೊಲೀಸರು ವೇಗವಾಗಿ ಬಂದ ಟೆಂಪೊವನ್ನು ತಡೆದು ತಪಾಸಣೆ ನಡೆಸಿದಾಗ ಕಿರಿದಾದ ಸ್ಥಳದಲ್ಲಿ ಒಂದರ ಮೇಲೊಂದರಂತೆ ಕಟ್ಟಿ ಹಾಕಿದ್ದ 11 ಹಸುಗಳು ಹಾಗೂ 7 ಹೋರಿಗಳು ಸೇರಿ ಒಟ್ಟು 18 ಜಾನು ವಾರುಗಳ ಸಾಗಣೆ ಬೆಳಕಿಗೆ ಬಂದಿದೆ.

ಈ ಸಂಬಂಧ ಚಾಲಕ ಪೈರೋಜ್ ಖಾನ್ ಹಾಗೂ ಕ್ಲೀನರ್ ಫರ್ಮನ್ ಎಂಬುವರನ್ನು ಬಂಧಿಸಲಾಗಿದೆ. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲಿನವರು. ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಣೆ ಮಾಡಿರುವ 18 ಜಾನುವಾರುಗಳನ್ನು ಮೈಸೂರಿನ ಗೋಶಾಲೆಗೆ ಸಾಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗೋಮಾಂಸ ವಶ: ಟೆಂಪೊವೊಂದರಲ್ಲಿ ಸಾಗಿಸುತ್ತಿದ್ದ ಒಂದೂವರೆ ಟನ್ ಗೋಮಾಂಸವನ್ನು ಪುರ ಪೊಲೀಸರು ಮಂಗಳವಾರ ಪಟ್ಟಣದ ಹನುಮಂತನಗರ ಬಳಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಹುಣಸೂರು ಕಸಾಯಿಖಾನೆಯಿಂದ ಬೆಂಗಳೂರಿಗೆ ಗೋಮಾಂಸ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಟೆಂಪೊವನ್ನು ತಡೆದು ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಹುಣಸೂರು ಮೂಲದವರಾದ ಚಾಲಕ ಅಬ್ಬಾಸ್ ಹಾಗೂ ಕ್ಲೀನರ್ ಸಮೀರ್ ಎಂಬುವರನ್ನು ಬಂಧಿಸಲಾಗಿದೆ. ಟೆಂಪೊದಲ್ಲಿ ಚೀಲಗಳಲ್ಲಿ ಶೇಖರಣೆ ಮಾಡಿದ್ದ ಗೋಮಾಂಸವನ್ನು ವಶಕ್ಕೆ ಪಡೆದು, ನಾಶಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.