ADVERTISEMENT

ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆ

ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 15:44 IST
Last Updated 4 ಏಪ್ರಿಲ್ 2024, 15:44 IST
ಕುದೂರು ಹೋಬಳಿ ವ್ಯಾಪ್ತಿಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಪೂರ್ವಭಾವಿ ಸಭೆ ನಡೆಯಿತು
ಕುದೂರು ಹೋಬಳಿ ವ್ಯಾಪ್ತಿಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಪೂರ್ವಭಾವಿ ಸಭೆ ನಡೆಯಿತು    

ಕುದೂರು: ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಪೂರ್ವಭಾವಿ ಸಭೆಯನ್ನು ಬುಧವಾರ ಕುತ್ತಿನಗೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಉತ್ತಮ ಅಭ್ಯರ್ಥಿ. ಅವರ ಗೆಲುವು ಸಾಧಿಸಿ ಸಂಸದರಾದರೆ ದೇಶಕ್ಕೆ ಮಾದರಿಯಾಗುತ್ತಾರೆ. ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು. ವಿರೋಧಿಗಳು ಯಾವುದೇ ರೀತಿ ಆಸೆ, ಆಮಿಷವೊಡ್ಡಿದರೂ ಯಾರೂ ಮರುಳಾಗದೆ ಅವರನ್ನು ಹೆಚ್ಚಿನ ಮತಗಳ ಮೂಲಕ ಆಯ್ಕೆ ಮಾಡಬೇಕು ಎಂದರು.

ಬಿಜೆಪಿ ಮುಖಂಡ ಕೆ.ಆರ್ ಪ್ರಸಾದ್ ಗೌಡ ಮಾತನಾಡಿ, ಬಡ ಜನರ ಸೇವೆ ಮಾಡಲು ಮಂಜುನಾಥ್‌ ಅವರಿಗೆ ಅವಕಾಶ ಕಲ್ಪಿಸಬೇಕೆಂದು ಹೇಳಿದರು.

ADVERTISEMENT

ಕಾಂಗ್ರೆಸ್ ಮುಖಂಡರಾದ ಮರೂರು ಕುಮಾರ್, ಮಲ್ಲಪ್ಪನಹಳ್ಳಿ ರಜನಿ, ಕೆಂಪೇಗೌಡ, ರಂಗಸ್ವಾಮಯ್ಯ, ವೆಂಕಟೇಶ್ ಮತ್ತು ಹಲವು ಮುಖಂಡರು ಕಾಂಗ್ರೆಸ್ ತೊರೆದು ಮಾಜಿ ಶಾಸಕ ಎ.ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮರೂರು ವೆಂಕಟೇಶ್, ಕೆ.ಆರ್.ಯತಿರಾಜು, ಮಾಜಿ ಸದಸ್ಯ ಹನುಮೇಗೌಡ, ಕುದೂರು ಪುರುಷೋತ್ತಮ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ ವೆಂಕಟೇಶ್, ಸಾಗರ್ ಗೌಡ, ಸುಹೇಲ್, ಕಾಗಿಮುಡು ಜಗದೀಶ್, ಪ್ರೇಮಣ್ಣ, ವಿನಯ್, ಮಂಜುನಾಥ್, ಕಣ್ಣೂರು ನಾಗರಾಜ್, ಸಂಪತ್ ಮತ್ತಿತರರು ಇದ್ದರು.

ಕುದೂರು ಹೋಬಳಿ ವ್ಯಾಪ್ತಿಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಪೂರ್ವಬಾವಿ ಸಭೆಯಲ್ಲಿ ಮಾಜಿ ಶಾಸಕ ಎ. ಮಂಜುನಾಥ್ ಸಮ್ಮುಖದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.