ADVERTISEMENT

ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:30 IST
Last Updated 12 ಜೂನ್ 2024, 6:30 IST
ಪೋಟೋ 11ಮಾಗಡಿ2: ಮಾಗಡಿ ಪಟ್ಟಣದ ಪುರಸಭೆಯ 20ನೇ ವಾಡರ್ಿನ ಅಗ್ರಹಾರ ಬೀದಿಯಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಬಗ್ಗೆ ನಾಗರಿಕರು ತೋರಿಸುತ್ತಿರುವುದು.
ಪೋಟೋ 11ಮಾಗಡಿ2: ಮಾಗಡಿ ಪಟ್ಟಣದ ಪುರಸಭೆಯ 20ನೇ ವಾಡರ್ಿನ ಅಗ್ರಹಾರ ಬೀದಿಯಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಬಗ್ಗೆ ನಾಗರಿಕರು ತೋರಿಸುತ್ತಿರುವುದು.   

ಮಾಗಡಿ: ನಗರೋತ್ಥಾನ ಯೋಜನೆ ಅಡಿ ಪಟ್ಟಣದ 20ನೇ ವಾರ್ಡ್‌ನ ಅಗ್ರಹಾರ ಬೀದಿಯಲ್ಲಿ ಕೈಗೊಂಡಿರುವ ಕಾಮಗಾರಿ ಅರ್ಧಕ್ಕೆ ನಿಂತು ವರ್ಷ ಕಳೆದಿದೆ ಎಂದು ಪುರಸಭೆ ಸದಸ್ಯ ಕೆ.ವಿ.ಬಾಲು ಆರೋಪಿಸಿದ್ದಾರೆ.

ನಗರೋತ್ಥನದ ಅಡಿ ಕೈಗೊಂಡಿರುವ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಪುರಸಭಾ ಅಧಿಕಾರಿಗಳು ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಮಂಗಳವಾರ ಮನವಿ ಮಾಡಿದರು.

ಅಗ್ರಹಾರ ಬೀದಿಯಲ್ಲಿ ಎರಡು ಕಡೆ ಚರಂಡಿ ಮತ್ತು ಕವರಿಂಗ್ ಸ್ಲಾಬ್ ಅಳವಡಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಂಜೂರಾಗಿದೆ. ಒಂದು ಕಡೆ ಚರಂಡಿ ನಿರ್ಮಿಸಿ ಕವರಿಂಗ್ ಸ್ಲಾಬ್ ಅಳವಡಿಸಿರುವುದನ್ನು ಬಿಟ್ಟರೆ, ಮತ್ತೊಂದು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ. ಇದರಿಂದ  ತೊಂದರೆಯಾಗಿದೆ ಎಂದರು.

ADVERTISEMENT

ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ನಗರೋತ್ಥನ ಅಡಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬಾರದೆಂದು ಜಿಲ್ಲಾಧಿಕಾರಿ ಹಾಗೂ ಪುರಸಭೆ ಪಿಡಿಯವರಿಗೆ ದೂರು ನೀಡುವುದಾಗಿ ಹೇಳಿದರು.  

ಪೋಟೋ 11Magadi3 : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ.ಸಿ.ಎನ್ ಮಂಜುನಾಥ್ ರವರ ಗೆಲುವಿಗಾಗಿ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ ಸುತ್ತ ಸುಮಾರು 1ಕಿಲೋ ಮೀಟರ್ ಉರುಳು ಸೇವೆ ಮಾಡಿದ ಮಾಜಿ ಶಾಸಕ ಎ.ಮಂಜಣ್ಣನವರ ಅಭಿಮಾನಿಗಳಾದ ಮಂಜು ಹಾಗೂ ಚಂದ್ರು ರವರನ್ನು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷರಾದ ಎ.ಎಚ್. ಬಸವರಾಜು ರವರು ಸನ್ಮಾನಿಸಿ ಗೌರವಿಸಿದರು ಇದೇ ವೇಳೆ ಜೆಡಿಎಸ್ ಬಿಜೆಪಿ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.