ADVERTISEMENT

ಗುರುನಾನಕ್ ಜಯಂತಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 6:14 IST
Last Updated 16 ನವೆಂಬರ್ 2024, 6:14 IST
ಸೋಲೂರಿನ ರಾಜಶೇಖರಯ್ಯ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಗುರುನಾನಕ್ ಜಯಂತಿ ಆಚರಿಸಲಾಯಿತು
ಸೋಲೂರಿನ ರಾಜಶೇಖರಯ್ಯ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಗುರುನಾನಕ್ ಜಯಂತಿ ಆಚರಿಸಲಾಯಿತು   

ಕುದೂರು: ಇಲ್ಲಿನ ರಾಜಶೇಖರಯ್ಯ ಪಬ್ಲಿಕ್‌  ಶಾಲೆಯಲ್ಲಿ ಶುಕ್ರವಾರ ಗುರುನಾನಕ್ ಜಯಂತಿಯ ನಡೆಯಿತು.

ಗುರುನಾನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಶಾಲೆಯ ಪ್ರಾಂಶುಪಾಲೆ ಸುಲೋಚನ ಮಾತನಾಡಿ, ವಿಶ್ವ ಭ್ರಾತೃತ್ವ, ಸಮಾನತೆಯನ್ನು ಸರಳ ಸುಂದರ ಪದಗಳಿಂದ ಸಕಲರಿಗೂ ಅರ್ಥವಾಗುವಂತೆ ತಿಳಿಸಿದರು.  ಸಿಖ್ ಪಂತದ ಪ್ರಥಮ ಗುರು ಗುರುನಾನಕರು ಯುಗಪುರುಷರು ಎಂದು ಬಣ್ಣಿಸಿದರು.

ADVERTISEMENT

ಮನುಕುಲದ ಉದ್ದಾರ ಮಾಡುವ ಕಾರ್ಯದಲ್ಲಿ ಹಾಗೂ ಸಮಾಜ ಸುಧಾರಣೆ ಮಾಡಲು ಗುರುನಾನಕರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.

ಇದೇ ವೇಳೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.