ADVERTISEMENT

ಆರು ತಿಂಗಳ ಒಳಗೆ ರೈತರ ಅರ್ಜಿ ವಿಲೇವಾರಿ

ಶಾಸಕ ಎಚ್‌.ಸಿ. ಬಾಲಕೃಷ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 6:40 IST
Last Updated 13 ಜೂನ್ 2024, 6:40 IST
ಪೋಟೋ 12Magadi2: ಮಾಗಡಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಭೆ ನಡೆಯಿತು. ತಹಸಿಲ್ದಾರ್ ಶರತ್ ಕುಮಾರ್ ಜೊತೆಲಿದ್ದರು.
ಪೋಟೋ 12Magadi2: ಮಾಗಡಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಭೆ ನಡೆಯಿತು. ತಹಸಿಲ್ದಾರ್ ಶರತ್ ಕುಮಾರ್ ಜೊತೆಲಿದ್ದರು.   

ಮಾಗಡಿ: ರೈತರ ಅರ್ಜಿಗಳನ್ನು ಆರು ತಿಂಗಳ ಒಳಗಾಗಿ ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಭರವಸೆ ನೀಡಿದ್ದಾರೆ.

ತಾಲ್ಲೂಕು ಕಚೇರಿ ಆವರಣದಲ್ಲಿ ಭೂ ಮಂಜೂರಾತಿ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಅಧಿಕಾರಿಗಳು ಮತ್ತು ಭೂ ಮಂಜೂರಾತಿ ಸಮಿತಿ ಸದಸ್ಯರ ಜೊತೆ ಚರ್ಚಿಸಲಾಗಿದೆ. ಹಲವು ವರ್ಷಗಳಿಂದಲೂ 500ಕ್ಕೂ ಹೆಚ್ಚು ರೈತರ ಅರ್ಜಿ ಬಾಕಿ ಇದ್ದು ಆರು ತಿಂಗಳ ಒಳಗೆ ವಿಲೇವಾರಿ ಮಾಡಲಾಗುವುದು. ಜೊತೆಗೆ ರೈತರ ಸಮಸ್ಯೆ ಬಗೆಹರಿಸಿ ಭೂ ಮಂಜೂರಾತಿ ಮಾಡಿಸಲಾಗುವುದು ಎಂದರು.

ತಾಲ್ಲೂಕು ಕಚೇರಿ ಶಿಥಿಲಾವಸ್ಥೆಯಲ್ಲಿದ್ದು ಕಂದಾಯ ಇಲಾಖೆ ಗಮನಕ್ಕೆ ತರಲಾಗಿದೆ. ಅಂದಾಜು ₹17 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.

ADVERTISEMENT

ಗ್ರಾಮ ಲೆಕ್ಕಾಧಿಕಾರಿಗಳು ಹೋಬಳಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಪರಿಶೀಲಿಸಿ, ಒತ್ತುವರಿ ಆಗಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಸೂಚನೆ ನೀಡಿದರು.

ತಹಶೀಲ್ದಾರ್ ಶರತ್ ಕುಮಾರ್, ಬಗುರ್ ಹುಕುಂ ಕಮಿಟಿ ಸದಸ್ಯರಾದ ಆಗ್ರೋ ಪುರುಷೋತ್ತಮ್, ಗೆಜ್ಜಗುಪ್ಪೆ ಕುಮಾರ್, ಶಿರಸ್ತೆದಾರರಾದ ರಶ್ಮಿ, ಅರ್.ಐ.ಮಧು, ನಟರಾಜು, ವೆಂಕಟೇಶ್, ತಾಲ್ಲೂಕು ವಲಯ ಅರಣ್ಯ ಇಲಾಖೆ ಅಧಿಕಾರಿ ಚೈತ್ರ  ಭಾಗವಹಿಸಿದ್ದರು.

- ಪೊಲೀಸರಿಗೆ ದೂರು ನೀಡಿ : ಪಟ್ಟಣದ ಕಲ್ಯಾಗೇಟ್ ಹತ್ತಿರ ಹೊಸದಾಗಿ ಮೊಬೈಲ್ ಟವರ್ ನಿಮರ್ಾಣ ಮಾಡುತ್ತಿರುವ ಸ್ಥಳೀಯ ಮಹಿಳೆಯರು ಶಾಸಕ ಬಾಲಕೃಷ್ಣ ರವರಿಗೆ ದೂರು ನೀಡಿ ಯಾವುದೇ ಕಾರಣಕ್ಕೂ ಜನನಿಬಿಡ ಪ್ರದೇಶದಲ್ಲಿ ಮೊಬೈಲ್ ಟವರ್ ನಿಮರ್ಾಣ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು ಇದಕ್ಕೆ ಶಾಸಕರು ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕಾಮಗಾರಿ ಆರಂಭಿಸಿದಂತೆ ಸೂಚನೆ ಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.