ಮಾಗಡಿ: ಚನ್ನಪಟ್ಟಣ ಉಪಚುನಾವಣೆಗೆ ನಿಯೋಜನೆಗೊಂಡಿರುವ ಭಾರತೀಯ ಯೋಧರೊಂದಿಗೆ ರೈತ ಸಂಘದ ಮುಖಂಡರು ದೀಪಾವಳಿ ಆಚರಿಸಿದರು.
ಪಟ್ಟಣದ ಸೋಮೇಶ್ವರ ಮುಖ್ಯರಸ್ತೆಯ ಚೆಕ್ ಪೋಸ್ಟ್ ಬಳಿ ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಪುರಸಭೆ ಅಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ ಸೇರಿ ಅನೇಕ ಗಣ್ಯರು ಯೋಧರಿಗೆ ಸಿಹಿ ತಿನಿಸಿ ಪಟಾಕಿ ಹಚ್ಚುವ ಮೂಲಕ ಹಬ್ಬ ಆಚರಿಸಿದರು.
ಲೋಕೇಶ್ ಮಾತನಾಡಿ, ಕುಟುಂಬದ ಸದಸ್ಯರ ಜೊತೆ ದೀಪಾವಳಿಯನ್ನು ಪ್ರತಿಯೊಬ್ಬರೂ ಆಚರಿಸುತ್ತಾರೆ. ಆದರೆ ದೇಶ ಕಾಯುವುದರ ಜತೆಗೆ ಚುನಾವಣೆ ಕರ್ತವ್ಯ ನಿರ್ವಹಿಸುವ ಯೋಧರ ಹಬ್ಬದಿಂದ ದೂರ ಇರಬಾರದೆಂದು ಅವರೊಂದಿಗೆ ದೀಪಾವಳಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪಟಾಕಿ ಅಂಗಡಿ ಮಾಲೀಕ ದೊಡ್ಡಿ ಲೋಕೇಶ್, ರೈತ ಸಂಘದ ಯುವ ಘಟಕದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಲೋಕೇಶ್, ಶಶಿ, ಮೂರ್ತಿ ನಾಯಕ್, ಶೇಖರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.