ಮಾಗಡಿ: ತೆಂಗು ಅಭಿವೃದ್ದಿ ಮಂಡಳಿಯಿಂದ ತೆಂಗು ಮರವೇರಿ ಕಾಯಿ ಕೀಳುವ ರೈತರು ಮತ್ತು ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ‘ಕೇರಾ ಸುರಕ್ಷಾ’ ವಿಮಾ ಯೋಜನೆ ಜಾರಿಗೆ ತರಲಾಗಿದ್ದು, ತೆಂಗಿನ ಮರ ಹತ್ತುವಾಗ ಮರಣ ಹೊಂದಿದ್ದಲ್ಲಿ, ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ಗರಿಷ್ಠ ₹5 ಲಕ್ಷವರೆಗೆ ವಿಮಾ ಮೊತ್ತ ಪಾವತಿಸಲಾಗುತ್ತದೆ.
ಈ ವಿಮಾ ಯೋಜನೆಯಡಿ ವಾರ್ಷಿಕ ಪ್ರೀಮಿಯಂ ₹375/ ಆಗಿರುತ್ತದೆ. ಶೇ.25 ರಷ್ಟು (₹94) ಮಾತ್ರ ತೆಂಗಿನ ಮರ ಹತ್ತುವ ರೈತರು ಮತ್ತು ಕೂಲಿ ಕಾರ್ಮಿಕರು ಪಾವತಿಸಬೇಕು. ಉಳಿದ ಶೇ 75 ರಷ್ಟನ್ನು ಕೇಂದ್ರ ಸರ್ಕಾರದಿಂದ ಪಾವತಿಸುತ್ತದೆ. ವಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಲು ಆಸಕ್ತಿ ಇರುವವರು ನಿಗದಿತ ಅರ್ಜಿ, ಭಾವಚಿತ್ರ, ಆದಾರ್‌ಕಾರ್ಡ್, ವಯಸ್ಸಿನ ಪ್ರಮಾಣ ಪತ್ರ, ರೈತರ ವಂತಿಕೆಯ ರಶೀದಿಯನ್ನು ಸಲ್ಲಿಸಬೇಕು.
ಅಧ್ಯಕ್ಷರು, ತೆಂಗು ಅಭಿವೃದ್ಧಿ ಮಂಡಳಿ, ಕೇರಾ ಭವನ, ಎಸ್.ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ–682011 ಕೇರಳ. ಅರ್ಜಿ ಮತ್ತು ಮೇಲ್ಕಂಡ ದಾಕಲೆಗಳನ್ನು ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.