ADVERTISEMENT

ಇಂದು ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ಮರು ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:36 IST
Last Updated 30 ಅಕ್ಟೋಬರ್ 2024, 14:36 IST

ಮಾಗಡಿ: ರಾಜ್ಯ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ ಮರು ಸಮೀಕ್ಷೆ (ನಗರ) ಆರಂಭಿಸಿದ್ದು, ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಅ.31ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ಪಟ್ಟಣದ ಅಂಬೇಡ್ಕರ್ ಭವನ ಹಾಗೂ ಪುರಸಭೆ ಕಚೇರಿ ಸಭಾಂಗಣದಲ್ಲಿ ಸಮೀಕ್ಷೆ ಮತ್ತು ಗುರುತಿಸುವಿಕೆಯ ಶಿಬಿರ ನಡೆಯಲಿದೆ.

ನೋಂದಣಿ ಮಾಡಿಸಲು ಪಾಸ್ ಪೋರ್ಟ್ ಅಳತೆಯ ಒಂದು ಭಾವಚಿತ್ರ, ಕುಟುಂಬದ ಸದಸ್ಯರ ಒಳಗೊಂಡ ಒಂದು ಭಾವಚಿತ್ರ (ಅಳತೆ 6X4), ಬ್ಯಾಂಕ್ ಖಾತೆ ಪಾಸ್‌ಬುಕ್‌ ಮುಖ ಪುಟ ಮತ್ತು ಆಧಾರ್ ಪ್ರತಿಯನ್ನು ಮೂಲ ಪ್ರತಿಯೊಂದಿಗೆ ತರಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕಾರ್ಯ ನಿರ್ವಹಿಸುತ್ತಿರುವ ಅನೈರ್ಮಲ್ಯ ಶೌಚಾಲಯದ ಸ್ಥಳದ ವಿವರ ಸಲ್ಲಿಸಬೇಕು.

ಶಿಬಿರದಲ್ಲಿ ಸ್ವಯಂ ಭಾಗವಹಿಸಿ, ದಾಖಲೆಗಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮಾಗಡಿ ಪುರಸಭೆಯ ಮುಖ್ಯಾಧಿಕಾರಿ ಶಿವರುದ್ರಯ್ಯ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.