ADVERTISEMENT

ಸೋಲೂರು ಆರ್ಯ ಈಡಿಗರ ಮಠದಲ್ಲಿ ಶರನ್ನವರಾತ್ರಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 16:01 IST
Last Updated 28 ಸೆಪ್ಟೆಂಬರ್ 2024, 16:01 IST
ರೇಣುಕಾ ಯಲ್ಲಮ್ಮ ದೇವಿಯ ಮೂಲ ವಿಗ್ರಹ
ರೇಣುಕಾ ಯಲ್ಲಮ್ಮ ದೇವಿಯ ಮೂಲ ವಿಗ್ರಹ   

ಮಾಗಡಿ: ತಾಲ್ಲೂಕಿನ ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನ ಮಠದಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ವಿಖ್ಯಾತಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಅ.3 ರಿಂದ 12ವರೆಗೆ ಶರನ್ನನವರಾತ್ರಿ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಗ್ರಾಮದ ಆರ್ಯ ಈಡಿಗ ಮಹಾ ಸಂಸ್ಥಾನದ ಆವರಣದಲ್ಲಿರುವ ಭವ್ಯ ದೇವಸ್ಥಾನದಲ್ಲಿ ಪ್ರಸನ್ನ ಗಣಪತಿ, ಜಮದಗ್ನಿ ಮಹರ್ಷಿ ಹಾಗೂ ಪರಶುರಾಮ ದೇವರು, ನಾರಾಯಣ ಗುರುಗಳೊಂದಿಗೆ ಜಗನ್ಮಾತೆ ರೇಣುಕಾ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ಮಹೋತ್ಸವ ನಡೆಯಲಿದೆ. 

ಅ.3 ಗುರುವಾರ ಗಂಧದ ಅಲಂಕಾರ, 4ರಂದು ದ್ವಿತೀಯ ಶುಕ್ರವಾರ ಶಾಖಾಂಬರಿ ಅಲಂಕಾರ, 5ರಂದು ತೃತೀಯ ಶನಿವಾರ ವಿಳ್ಳೆದೆಲೆ ಅಲಂಕಾರ, 6ರಂದು ಚತುರ್ಥ ಭಾನುವಾರ ಗೋಡಂಬಿ ಅಲಂಕಾರ, 7ರಂದು ಪಂಚಮಿ ಸೋಮವಾರ ನಾಣ್ಯದ ಅಲಂಕಾರ, 8ರಂದು ಪಂಚಮಿ ಮಂಗಳವಾರ ಹೂವಿನ ಅಲಂಕಾರ, 9ರಂದು ಬುಧವಾರ ಸರಸ್ವತಿ ಅಲಂಕಾರ,10 ಗುರುವಾರ ಲಕ್ಷ್ಮಿ ಅಲಂಕಾರ, 11 ಅಷ್ಟಮಿ, ನವಮಿ ಶುಕ್ರವಾರ ದುರ್ಗಾ ಅಲಂಕಾರ, 12 ದಶಮಿ ಶನಿವಾರ ರಜತ ಕವಚ ಅಲಂಕಾರ, ಅಭಿಷೇಕ, ಶ್ರೀಚಂಡಿ ಸಪ್ತಶತಿ ಪಾರಾಯಣ, ಕಲ್ಲೋಕ್ತ ಪೂಜೆ ನಡೆಯಲಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.