ADVERTISEMENT

ಮಾಗಡಿ | ಸಾವಿತ್ರಿಬಾಯಿ ಫುಲೆ ಜಯಂತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 7:50 IST
Last Updated 9 ಜನವರಿ 2024, 7:50 IST
ಮಾಗಡಿ ಪಟ್ಟಣದ ಶ್ರೀಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಮಾತೆ ಸಾವಿತ್ರಿಬಾಯಿ ಪುಲೆ ಜನ್ಮದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಮಹೇಶ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಹಶಿಕ್ಷಕ–ಶಿಕ್ಷಕಿಯರು ಇದ್ದರು.
ಮಾಗಡಿ ಪಟ್ಟಣದ ಶ್ರೀಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಮಾತೆ ಸಾವಿತ್ರಿಬಾಯಿ ಪುಲೆ ಜನ್ಮದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಮಹೇಶ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಹಶಿಕ್ಷಕ–ಶಿಕ್ಷಕಿಯರು ಇದ್ದರು.   

ಮಾಗಡಿ: ಪಟ್ಟಣದ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.

ಮುಖ್ಯಶಿಕ್ಷಕ ಮಹೇಶ್‌ ಮಾತನಾಡಿ, ಭಾರತದಲ್ಲಿ ಎಲ್ಲಾ ಮಹಿಳೆಯರಿಗೆ ಶಿಕ್ಷಣ ದೊರಕುತ್ತಿರಲಿಲ್ಲ. ಲಾರ್ಡ್‌ ಮೆಕಾಲೆ ವರದಿ ಜಾರಿಗೊಳಿಸಿದ ನಂತರ ಮಹಿಳೆಯರಿಗೆ ಅಕ್ಷರ ಕಲಿಸಿದವರು ಸಾವಿತ್ರಿಬಾಯಿ ಫುಲೆ. ಅವರ ಆದರ್ಶ ಮನುಕುಲದ ಏಳಿಗೆಗೆ ಪೂರಕವಾಗಿವೆ. ಲಿಂಗ ತಾರತಮ್ಯ, ಅಸ್ಪೃಶ್ಯತೆ ನಿವಾರಣೆಯಾಗದ ಹೊರತು ದೇಶದಲ್ಲಿ ಸಮಸಮಾಜ ನಿರ್ಮಿಸುವುದು ಕಷ್ಟ. ಬಸವಾದಿಶರಣರು ಕಂಡ ಕಾಯಕ ಮತ್ತು ಸಮಾನತೆ, ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದರು.

ಸಹ ಶಿಕ್ಷಕರಾದ ರಜನಿ ಆರ್‌. ಕುಮಾರ್‌, ರಮ್ಯಾ, ಶಿವರುದ್ರಪ್ಪ, ಪೂರ್ಣಿಮಾ ಎಚ್‌.ಕೆ., ಸಿದ್ದಪ್ಪ ಅವರು ಸಾವಿತ್ರಿಬಾಯಿ ಫುಲೆ ಅವರ ಜೀವನ ಕುರಿತು ಮಾತನಾಡಿದರು. ಶಾಲಾ ಸಿಬ್ಬಂದಿ , ಅಕ್ಷರದಾಸೋಹದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.